ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿ ಮತ್ತೆ ನಿಯೋಜನೆಗೊಂಡಿರುವ ಅಶೋಕ ದುಡಗುಂಟಿ ಅವರು ಇದೀಗ ಮತ್ತೊಮ್ಮೆ ಬೆಳಗಾವಿ ಜನತೆಯ ಮನೆಗೆದ್ದಿದ್ದಾರೆ. ನಸುಕಿನಲ್ಲೇ ಎದ್ದು ನಗರದಲ್ಲಿ ಸಂಚರಿಸಿ ಸ್ವಚ್ಛತಾ ಕೆಲಸಗಳ ಪರಿಶೀಲನೆ ನಡೆಸಲು ಮುನ್ನುಡಿ ಬರೆದಿರುವ ಆಯುಕ್ತ ಅಶೋಕ ದುಡಗುಂಟಿ ಅವರು ತಾವೇ ಸ್ವತಃ ಫಾಂಗಿಂಗ್ ಮಾಡುವ ಮೂಲಕ ಜನತೆಯ ಮನೆಗೆದ್ದಿದ್ದಾರೆ. ಇದೀಗ ಮಳೆಗಾಲ ಆರಂಭವಾಗಿದೆ. ಸಾಂಕ್ರಾಮಿಕ ರೋಗ ಹರಡುತ್ತಿವೆ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದ್ದು ಸ್ವಚ್ಛತಾ ಕೆಲಸ ಜೋರಾಗಿ ನಡೆಸುತ್ತಿದೆ. ಸ್ವಚ್ಛತಾ ಕಾರ್ಮಿಕರ ಹಾಜರಾತಿ ಪರಿಶೀಲನೆ ನಡೆಸಿದ ನಂತರ ಕಾರ್ಮಿಕನ ಬಳಿ ಇದ್ದ ಫಾಂಗಿಂಗ್ ಯಂತ್ರವನ್ನು ತೆಗೆದುಕೊಂಡು ತಾವೇ ಸ್ವತಃ ಫಾಂಗಿಂಗ್ ಮಾಡಿದ್ದಾರೆ.
ತಾವೇ ಸ್ವತಃ ಫಾಂಗಿಂಗ್ ಮಾಡಿ ಜನತೆಯ ಮನಗೆದ್ದ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು !
