ನವದೆಹಲಿ: ದೇಶದಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ಅಡುಗೆ ಅನಿಲದ ಬೆಲೆಯನ್ನು ಕಡಿತಗೊಳಿಸುವುದಾಗಿ ತೈಲ ಮಾರುಕಟ್ಟೆ ಕಂಪನಿಗಳು ಘೋಷಿಸಿವೆ.
ಆಗಸ್ಟ್ 31 ರ ಮಧ್ಯರಾತ್ರಿ ತೈಲ ಕಂಪನಿಗಳು ಈ ಘೋಷಣೆ ಮಾಡಿದ್ದು ಇಂದಿನಿಂದ (ಸೆ.1) 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ ರೂ. 51.50 ರಷ್ಟು ಕಡಿಮೆಯಾಗಿದ್ದು, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ನ ಪರಿಷ್ಕೃತ ದರ ರೂ. 1,580 ಆಗಿದೆ. ಮುಂಬೈನಲ್ಲಿ, ರೂ. 1,531.50 ಕ್ಕೆ ಇಳಿದಿದೆ, ಕೋಲ್ಕತ್ತಾದಲ್ಲಿ ರೂ. 1,684 ಆಗಿದ್ದು ಜೊತೆಗೆ ಪಾಟ್ನಾದಲ್ಲಿ ಅತಿ ಹೆಚ್ಚು ಬೆಲೆ ಇದ್ದು, ಅಲ್ಲಿ ಸಿಲಿಂಡರ್ನ ಬೆಲೆ ರೂ. 1,829 ಆಗಿದೆ.
ವಾಣಿಜ್ಯ ಸಿಲಿಂಡರ್ಗಳ ಬೆಲೆಯಲ್ಲಿ ಇಳಿಕೆಯಾಗಿದ್ದರೂ, ಗೃಹಬಳಕೆಯ ಎಲ್ಪಿಜಿ (14.2 ಕೆಜಿ) ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ನ ಬೆಲೆ ದೆಹಲಿಯಲ್ಲಿ ರೂ. 853. ಮುಂಬೈನಲ್ಲಿ ರೂ. 852.5, ಕೋಲ್ಕತ್ತಾದಲ್ಲಿ ರೂ. 879 ಮತ್ತು ಪಾಟ್ನಾದಲ್ಲಿ ರೂ. 942.50 ಇದೆ.