ಬೆಳಗಾವಿ :
ಜೀವನ ವಿದ್ಯಾ ಮಿಶನ್ ಮುಂಬಯಿ ಇವರ ಆಶ್ರಯದಲ್ಲಿ ಫೆ.27 ಮತ್ತು 28 ರಂದು ಬೆಳಗಾವಿಯ ಧರ್ಮವೀರ ಸಂಭಾಜಿ ಮಹಾರಾಜ ಉದ್ಯಾನದಲ್ಲಿ 54 ನೇ ಸಂತಶ್ರೇಷ್ಠ ಶ್ರೀ ಜ್ಞಾನೇಶ್ವರ ಮಾವುಲಿ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಬೋಧಕ ಪ್ರಹ್ಲಾದ ವಾಮನರಾವ್ ಪೈ ಅವರು ಪ್ರತಿಯೊಂದು ಕೃತಿಯೂ ರಾಷ್ಟ್ರಹಿತದ್ದು, ವಿಶ್ವಶಾಂತಿಯದು ಎನ್ನುವ ವಿಷಯವಾಗಿ ಮಾತನಾಡಲಿದ್ದಾರೆ.
ಸಂಜೆ 5 ರಿಂದ 8 ಗಂಟೆಯವರೆಗೆ ಪ್ರಬೋಧನ ಕಾರ್ಯಕ್ರಮ ನಡೆಯಲಿದ್ದು ಆಸಕ್ತರು ಆಗಮಿಸಬೇಕಾಗಿ ಸ್ಥಳೀಯ ಸಂಘಟನೆಯವರು ವಿನಂತಿಸಿಕೊಂಡಿದ್ದಾರೆ.