ಶಾಲಾ ಮಕ್ಕಳಿಗೂ Ice ಆಮಿಷ…!
ರಾಜಕೀಯ ಪುಢಾರಿಗಳ ಚೆಲ್ಲಾಟಕ್ಕೆ ಜಿಲ್ಲಾಡಳಿತ ನವಿಲುನರ್ತನ..!
ಜನ ಜೀವಾಳ ಜಾಲ: ಬೆಳಗಾವಿ: ತಮ್ಮ ಭಾವಚಿತ್ರ ಹೊತ್ತ ಕೂಪನ್ ನೀಡುವ ಮೂಲಕ ಶಾಲಾ ಮಕ್ಕಳಿಗೆ ಐಸ್ಕ್ರೀಮ್ ವಿತರಣಾ ಆಮಿಷ N’ICE’* ಕಾರ್ಯ ನಡೆದಿದೆ.ನಗರದ ಉತ್ತರ ದಕ್ಷಿಣ ಕ್ಷೇತ್ರದ ಶಾಲಾ ಆವರಣಗಳ ಸುತ್ತ ಕೂಪನ್ ಮೂಲಕ ಐಸ್ ಕ್ರೀಮ್ ಹಂಚಿಕೆ ವಿಡಿಯೋ ಸಹಿತ ವರದಿಯಾಗಿದ್ದು ಗಮನ ಸೆಳೆದಿದೆ. ನೀತಿ ಸಂಹಿತೆ ಪ್ರಾರಂಭವಾಗುವುದನ್ನು ನೋಡುತ್ತ ಕುಳಿತುಕೊಳ್ಳಬೇಡಿ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೂಚನೆ ಮತ್ತು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಹಲವು ಬಗೆಯ ಆಮಿಷಗಳನ್ನು ತಡೆಗಟ್ಟುವ ಬಗೆಗಿನ ಆದೇಶದ ನಂತರವೂ ಇಂದು ಮತದಾರರ ಓಲೈಕೆಗಾಗಿ ಮುಗ್ದ ಮನದ ಮಕ್ಕಳಿಗೆ ಐಸ್ಕ್ರೀಮ/ ಚಾಕಲೇಟ್ ತಿನ್ನಿಸುವದು ನಡೆದಿದೆ.
ಶಾಲಾ ಮಕ್ಕಳಿಗೆ ಐಸ್ಕ್ರೀಮ್ ವಿತರಣೆ ಘಂಟಾಘೋಷವಾಗಿ ನಡೆದಿದೆ. ರಾಜಕೀಯ ಪುಢಾರಿಗಳ ನಾಟ್ಯಕ್ಕೆ ಪ್ರತಿಯಾಗಿ ಜಿಲ್ಲಾಡಳಿತ ನವಿಲುನರ್ತನ ಮಾಡುತ್ತಿದೆಯೇ ಎಂದು ಜನ ಆಕ್ರೋಶಭರಿತರಾಗಿದ್ದಾರೆ.
ಚುನಾವಣೆ ಮುನ್ನಲೆಯಲ್ಲಿ ಸಾಕಷ್ಟು ರಾಜಕೀಯ ಆಟಗಳು ನಡೆದಿದ್ದು, ಇವರ ಆಮಿಷದ ಪರಮಾವಧಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಜನರ ಮತಾಧಿಕಾರವನ್ನು ಮೋಸದಿಂದ ಸೆಳೆಯುವ ನಿರ್ಲಜ್ಜ ಪ್ರಯತ್ನ ಎಂದೇ ತಿಳಿಯಲಾಗುತ್ತಿದೆ.
ಕಾಂಗ್ರೆಸ್ ಕಾರ್ಯಕರ್ತೆ ಪ್ರಭಾವತಿ ಚಾವಡಿ ಕಿಡಿ: ಐಸ್ ಕ್ರೀಮ್ ವಿತರಿಸಲು ಜಿಲ್ಲಾಡಳಿತ ಶಾಸಕರಿಗೆ ಅನುಮತಿ ನೀಡಿದ್ದಲ್ಲದೇ ತನ್ನ ಶಿಕ್ಷಕರಿಗೂ ಸಹಕರಿಸಲು ಆದೇಶ ನೀಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸದರಿ ಆಮಿಷ ಪ್ರಕರಣ ಮತ್ತು ವಿಡಿಯೋ ದಾಖಲಾತಿಗೆ ಸಂಬಂಧಿಸಿ ಜಿಲ್ಲಾ ಚುನಾವಣಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಬೇಕಿದೆ.