-
ನಮ್ಮ ಕಣ್ಣೇ ಮಂದು..! .ಉಚಿತ- ಖಚಿತ
-
⏩ ಕಂಡಿದ್ದು ಒಂದು…! ಕಾಣದ್ದು ನೂರಾವೊಂದು…..!
-
⏩ ಗ್ರಾಮ ಒನ್….! ಅಡ್ವಾನ್ಸ್ ಕಲೆಕ್ಷನ್ ನಂ. 1….!!
-
⏩ ಒಂದು ಅರ್ಜಿಗೆ ಬರೋಬ್ಬರಿ ₹ 100 ಕೊಡಲೇ ಬೇಕಂತೆ..!
-
⏩ 250 ₹ ಎತ್ತುತ್ತಿದ್ದವನ ಅಂಗಡಿಗೆ ಬಿತ್ತೀಗ ಬೀಗ…!!
ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದಲ್ಲೂ ಜನರಿಂದ ಹಣ ವಸೂಲಿ ಮಾಡಿರುವ ಬಗ್ಗೆ ‘ಜನಜೀವಾಳ’ಕ್ಕೆ ಸಾರ್ವಜನಿಕರಿಂದ ದೂರು ರವಾನೆಯಾಗಿದೆ. ಒಂದು ಗೃಹ ಲಕ್ಷ್ಮೀ ಅರ್ಜಿಗೆ ರೂ.100 ತೆಗೆದುಕೊಳ್ಳಲಾಗಿದೆ. ಗ್ರಾಮ ಒನ್ ಕೇಂದ್ರದಲ್ಲೇ ಇಂಥ ಘಟನೆ ನಡೆಯುತ್ತಿದೆ. ಅಮಾಯಕ ಜನರು ಹಣ ನೀಡಿ ಅರ್ಜಿ ತುಂಬುವಂತಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಬೆಳಗಾವಿ :ರಾಜ್ಯದ ಕಾಂಗ್ರೆಸ್ ಸರಕಾರದ ಮಹತ್ವಕಾಂಕ್ಷಿ ಗ್ರಹಲಕ್ಷ್ಮಿ ಯೋಜನೆಗೆ ಇದೀಗ ಎಲ್ಲೆಡೆ ಅರ್ಜಿ ತುಂಬಿಕೊಳ್ಳಲಾಗುತ್ತಿದೆ. ರಾಜ್ಯ ಸರಕಾರ ಇದಕ್ಕೆ ಹಣ ನೀಡಬೇಡಿ ಎಂದು ಸಾರ್ವಜನಿಕರಲ್ಲಿ ಪದೇ ಪದೇ ಮನವಿ ಮಾಡಿಕೊಳ್ಳುತ್ತಿದೆ. ಆದರೆ ಸರಕಾರದ ಗ್ರಾಮ ಒನ್ ಕೇಂದ್ರಗಳು ಜನರಿಂದ ಬೇಕಾಬಿಟ್ಟಿಯಾಗಿ ಹಣ ಸುಲಿಗೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.
ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದಲ್ಲೂ ಜನರಿಂದ ಹಣ ವಸೂಲಿ ಮಾಡಿರುವ ಬಗ್ಗೆ ‘ಜನಜೀವಾಳ’ಕ್ಕೆ ಸಾರ್ವಜನಿಕರಿಂದ ದೂರು ರವಾನೆಯಾಗಿದೆ. ಒಂದು ಗೃಹ ಲಕ್ಷ್ಮೀ ಅರ್ಜಿಗೆ ರೂ.100 ತೆಗೆದುಕೊಳ್ಳಲಾಗಿದೆ. ಗ್ರಾಮ ಒನ್ ಕೇಂದ್ರದಲ್ಲೇ ಇಂಥ ಘಟನೆ ನಡೆಯುತ್ತಿದೆ. ಅಮಾಯಕ ಜನರು ಹಣ ನೀಡಿ ಅರ್ಜಿ ತುಂಬುವಂತಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
250 ರೂ.ಗಳನ್ನು ವಸೂಲಿ ಮಾಡುತ್ತಿದ್ದ ಕೇಂದ್ರಕ್ಕೆ ಬೀಗ:ರಾಜ್ಯಾದ್ಯಂತ ದಿನಾಂಕ:19/07/2023 ರಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ ಅರ್ಹ ಫಲಾನುಭವಿಗಳ ಉಚಿತವಾಗಿ ನೋಂದಣಿ ಕಾರ್ಯವು ಪ್ರಾರಂಭವಾಗಿದ್ದು, ಆಯ್ಕೆಯಾದ ಸ್ವಯಂ ಸೇವಕರು ಕಡ್ಡಾಯವಾಗಿ ಆನ್ಲೈನ್ ಮೂಲಕ ದತ್ತಾಂಶ ಗೌಪ್ಯತೆ, ದತ್ತಾಂಶವು ಸುರಕ್ಷತೆ, ದತ್ತಾಂಶವು ದುರುಪಯೋಗ ಪಡಿಸಿಕೊಳ್ಳುವುದಿಲ್ಲವೆಂದು ಹಾಗೂ ಒಂದು ವೇಳೆ ದುರುಪಯೋಗ ಪಡಿಸಿಕೊಂಡರೆ ಅಥವಾ ಸುಳ್ಳು ಮಾಹಿತಿ ನೀಡಿ ನೇಮಕಗೊಂಡಿರುವುದು ಕಂಡು ಬಂದಲ್ಲಿ ನಿಯಮಾನುಸಾರ ಕಾನೂನ ಕ್ರಮಕ್ಕೆ ಒಳಗಾಗಲೂ ಬದ್ಧನಾಗಿರುತ್ತೇನೆಂದು ಸ್ಪಷ್ಟ ಪಡಿಸಿರುತ್ತಾರೆ. ದಿನಾಂಕ:27/07/2023 ರಂದು ಸಾರ್ವಜನಿಕ ದೂರಿನ ಅನ್ವಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಬೆಳಗಾವಿ (ನಗರ) ಹಾಗೂ ತಹಶೀಲ್ದಾರರು, ಬೆಳಗಾವಿ ಇವರು ಬೆಳಗಾವಿ ನಗರದ ಚವಾಟಗಲ್ಲಿ, ಹನುಮಾನ ಮಂಗಲ ಕಾರ್ಯಾಲಯದ ಹತ್ತಿರವಿರುವ ಅದೃಶ ಆರ್ ಟಿ ಇವರ ಮಾಲೀಕತ್ವದ ಖಾಸಗಿ ಜನತಾ ಆನ್ ಲೈನ್ ಸೆಂಟರ್ ಗೆ ದಾಳಿ ಮಾಡಿದಾಗ ಗ್ರಾಮ ಒನ್ ಲಾಗಿನ ಐಡಿ ಬಳಸಿಕೊಂಡು ಪ್ರತಿ ಫಲಾನುಭವಿಯಿಂದ ತಲಾ 250 ರೂ.ಗಳನ್ನು ವಸೂಲಿ ಮಾಡುತ್ತಿರುವುದು ಕಂಡುಬಂದಿರುತ್ತದೆ. ತಕ್ಷಣವೇ ಆನ್ಲೈನ್ ಮಾಡಿರುವ ಅರ್ಜಿಗಳ ನೋಂದಣಿ ಕ್ರಮಾಂಕದ ಮೇಲೆ ಪರಿಶೀಲಿಸಿದಾಗ ಕಿರಣ ಚೌಗಲಾ ಇವರ ಮುತಗಾ ಗ್ರಾಮ್ ಒನ್ ಸೆಂಟರಿನ ಐಡಿ ಪತ್ತೆಯಾಗಿರುತ್ತದೆ. ಕಾರಣ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ.
ಕೊನೆಗೂ ಬೀಗ :ಮುತಗಾ ಗ್ರಾಮ ಒನ್ ಐಡಿ ಬಳಸಿ ಖಾಸಗಿ ಸೆಂಟರ್ ನಿಂದ ಗೃಹಲಕ್ಷ್ಮೀ ಫಲಾನುಭವಿಗಳ ನೋಂದಣಿ ಫಲಾನುಭವಿಗಳಿಂದ 250 ರೂಪಾಯಿ ವಸೂಲಿ ಮಾಡಿರುವ ಹಿನ್ನೆಲೆಯಲ್ಲಿ ಆನ್ ಲೈನ್ ಸೆಂಟರ್ ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.