ಬೆಳಗಾವಿ :
ನಮ್ಮ ಯುವ ಜನಾಂಗವು ರಾಷ್ಟ್ರದ ಸಂಪತ್ತಾಗಿದ್ದು ದೇಶದ ಸಂಸ್ಕೃತಿ ಪರಂಪರೆ ಹಾಗೂ ಪರಿಸರವನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ. ಪರಿಸರವನ್ನು ಸಂರಕ್ಷಿಸಿ ಅದನ್ನು ಪೋಷಿಸಿ ಬೆಳೆಸುವುದು ಕೂಡ ನಮ್ಮ ಕರ್ತವ್ಯವಾಗಿದೆ ಎಂದು ಏನ್ ಸಿಸಿಯ ಪ್ರಮುಖ ಧ್ಯೇಯವಾಗಿದೆ ಎಂದು ಬೆಳಗಾವಿಯೇ ಎನ್ ಸಿ ಸಿ ಗ್ರೂಪ್ ಕಮಾಂಡರ್ ಕರ್ನಲ್ ಎಸ್ ಶ್ರೀನಿವಾಸ ಹೇಳಿದರು.
ಅವರು ಬೆಳಗಾವಿಯ ಜಾದವ್ ನಗರದಲ್ಲಿ ಬೆಳಗಾವಿ ಎನ್ ಸಿ ಸಿ ಗ್ರೂಪ್ ಅಡಿಯಲ್ಲಿ ಜರುಗುತ್ತಿರುವ ಅಖಿಲ ಭಾರತ ಟ್ರ್ಯಾಕಿಂಗ್ ( ಚಾರಣ) ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. 15 ಡಿಸೆಂಬರ್ ದಿಂದ 22, ಡಿಸೆಂಬರ್ 2022 ರವರೆಗೆ ಜರುಗುತ್ತಿರುವ ಈ ಶಿಬಿರದಲ್ಲಿ ಯುವಕರಲ್ಲಿ ಸಾಹಸ ಪ್ರವೃತ್ತಿಯನ್ನು ಮೂಡಿಸಲಿದೆ.ಯುವ ಸಮುದಾಯದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸುವುದು ಹಾಗೂ ಪರಿಸರದ ಕಾಳಜಿಯ ಬಗ್ಗೆ ಜಾಗೃತಿಯನ್ನು ಹುಟ್ಟು ಹಾಕುವುದು ಈ ಶಿಬಿರದ ಉದ್ದೇಶವಾಗಿದೆ. ವಿವಿಧ ರಾಜ್ಯಗಳಿಂದ ಆಗಮಿಸಿರುವ ವಿದ್ಯಾರ್ಥಿಗಳು ಒಟ್ಟಾಗಿ ಸುತ್ತಮುತ್ತಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯಲಿದ್ದಾರೆ.
ಸೌಜನ್ಯತೆಗಳನ್ನು ಸಮಯ ಪಾಲನೆಯನ್ನು ಅಳವಡಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕೆಂದು ಹೇಳಿದರು.
ನಾವು ಪ್ರಕೃತಿಯ ಭಾಗವಾಗಿದ್ದು ಅಂತಹ ಪ್ರಕೃತಿಯನ್ನು ಕಾಪಾಡಿಕೊಳ್ಳುವುದು ಕೂಡ ನಮ್ಮ ಕರ್ತವ್ಯವಾಗಿದೆ. ಪ್ರಕೃತಿಯೊಂದಿಗೆ ನಾವು ಬೆರೆಯಬೇಕು. ಪ್ರಕೃತಿ ಸೌಂದರ್ಯವನ್ನು ಸವಿಯಬೇಕು. ಪರಿಸರದ ಜಾಗೃತಿಯನ್ನು ಸಮಾಜಕ್ಕೆ ಮುಟ್ಟಿಸಬೇಕೆಂದು ಹೇಳಿದರು.
26 ಕರ್ನಾಟಕ ಬೆಟಾಲಿಯನ್ ಕಮೊಂಡಿಂಗ್ ಆಫೀಸರ್ ಚಾರಣ ಶಿಬಿರದ ಕಮಾಂಡೆಂಟ್ ಕರ್ನಲ್ ಎಸ್ ದರ್ಶನವರು ಈ ಸಂದರ್ಭದಲ್ಲಿ ಮಾತನಾಡುತ್ತ ಎನ್ ಸಿ ಸಿ ಕೆಡೆಟ್ಗಳಲ್ಲಿ ಸಾಹಸಮಯ ಮತ್ತು ಪರಿಶೋಧನಾತ್ಮಕ ಮನೋಭಾವವನ್ನು ಬೆಳೆಸುವುದು,
ದೈಹಿಕ ಸಾಮರ್ಥ್ಯ, ಸಹಿಷ್ಣುತೆ, ಆತ್ಮ ವಿಶ್ವಾಸ, ತಂಡದ ಮನೋಭಾವ ಮತ್ತು ಉತ್ಸಾಹವನ್ನು ಬೆಳೆಸಿಸುವದು.
ಪ್ರಕೃತಿಯಲ್ಲಿಯ ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ಪ್ರೀತಿಯನ್ನು ಬೆಳೆಸಿಸುವದು. ಅರಣ್ಯ, ವನ್ಯಜೀವಿ, ಪರಿಸರ ಸಮತೋಲನದ ಸಂರಕ್ಷಣೆಗಾಗಿ ಕಾಳಜಿಯನ್ನು ಅಭಿವೃದ್ಧಿಪಡಿಸುವುದು,
ಪ್ರಾಚೀನ ಸ್ಮಾರಕಗಳು ಮತ್ತು ಪರಿಸರ ಸ್ವಚ್ಛತೆ, ಸ್ಥಳೀಯ ಪದ್ಧತಿಗಳು, ಧಾರ್ಮಿಕ ನಂಬಿಕೆಗಳು, ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಗೌರವವನ್ನು ಮೂಡಿಸುವುದು.
ನಮ್ಮ ದೇಶದ ವಿಶಾಲತೆಯ ಅನುಭವವನ್ನು ಪಡೆಯಲು ಹೊಸ ಪ್ರದೇಶಗಳಿಗೆ ಭೇಟಿ ನೀಡಿ
ಅದರ ಸಂಸ್ಕೃತಿಯ ವೈವಿಧ್ಯತೆ ಪರಿಚಯಿಸುವುದು ಈ ಚಾರಣದ ಉದ್ದೇಶವಾಗಿದೆ, ದೇಶದ ನಾನಾ ಭಾಗಗಳಿಂದ ಆಗಮಿಸಿರುವ NCC ಕಾಡೆಟ್ಸ್ ಗಳು ಒಟ್ಟಿಗೆ ವಾಸಿಸುವ ಮೂಲಕ ರಾಷ್ಟ್ರೀಯ ಪ್ರಜ್ಞೆ ಹಾಗೂ ಏಕತೆಯನ್ನು ಉತ್ತೇಜಿಸಲಿದ್ದಾರೆ ಎಂದು ಹೇಳಿದರು.
ಈ ಚಾರಣ ಶಿಬಿರದಲ್ಲಿ ಕರ್ನಾಟಕ ಮೊದಲಾಗಿ ಆಂಧ್ರ ಪ್ರದೇಶ್, ತೆಲಂಗಾಣ, ಪಾಂಡಿಚೆರಿ, ತಮಿಳುನಾಡು, ಕೇರಳ, ಗುಜರಾತ್, ಲಕ್ಷದೀಪ 510 ಎನ್ ಸಿ ಸಿ ಕ್ಯಾಡೆಟ್ ಗಳು ಪಾಲ್ಗೊಂಡಿದ್ದಾರೆ.