ಅಂದು ಇಂದು ಎಲ್ಲವೂ ಸಾಮ್ಯತೆ…!!!
ಫೆಬ್ರವರಿ 27 ಮೋದಿ ಮತ್ತು ಬೆಳಗಾವಿಗೂ ಅವಿನಾಭಾವ ನಂಟು. 2016 ರ ಫೆಬ್ರವರಿ 27 ರಂದೇ ಮೋದಿ ಬೆಳಗಾವಿಗೆ ಆಗಮಿಸಿದ್ದರು. ಇದೇ ದಿನವಾದ ಇಂದು ಸಹಾ ಬೆಳಗಾವಿಗೆ ಆಗಮಿಸಿದ್ದು ವಿಶೇಷ. ಜನಜೀವಾಳ ಈ ವಿಶೇಷ ಸಂದರ್ಭವನ್ನು ಮತ್ತೆ ತನ್ನ ಓದುಗರಿಗೆ ನೆನಪಿಸುವ ವಿಶೇಷ ಪ್ರಯತ್ನವನ್ನು ಮಾಡಿದೆ.
ಜನ ಜೀವಾಳ ಸರ್ಚಲೈಟ್ : ಬೆಳಗಾವಿ
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 27 ರಂದು ಸೋಮವಾರ ಬೆಳಗಾವಿಗೆ ಬಂದು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಈ ಹಿಂದೆಯೂ ಅವರು ಇದೇ ದಿನದಂದು ಬೆಳಗಾವಿಗೆ ಆಗಮಿಸಿದ್ದರು. 2016 ರ ಫೆಬ್ರವರಿ 27 ರಂದೇ ಬೆಳಗಾವಿ ಸುರೇಶ ಅಂಗಡಿ ಮಹಾವಿದ್ಯಾಲಯದ ಆವರಣದಲ್ಲಿ ಫಸಲ್ ಭಿಮಾ ಯೋಜನೆಗೆ ಚಾಲನೆ ನೀಡಿ ಬೃಹತ್ ರೈತರ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಆಗ ಯಡಿಯೂರಪ್ಪ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದರು.
ಕಾಕತಾಳೀಯ ಎನ್ನುವಂತೆ ಈ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗಕ್ಕೆ ಭೇಟಿ ನೀಡಿ ನೂತನ ವಿಮಾನ ನಿಲ್ದಾಣ ಉದ್ಘಾಟಿಸಿದ್ದಾರೆ. ಶಿವಮೊಗ್ಗೆ ಜೊತೆಗೆ ಮಧ್ಯಾಹ್ನ ಬೆಳಗಾವಿಗೂ ಆಗಮಿಸಿ ಮೊಟ್ಟಮೊದಲ ಬಾರಿಗೆ ಪ್ರಧಾನಿಯೊಬ್ಬರ 10ಕಿಮೀ ರೋಡ್ ಶೋಗೆ ಸಾಕ್ಷಿಯಾದರು.
ಇಂದು ಬೆಳಿಗ್ಗೆ ಶಿವಮೊಗ್ಗೆಗೆ ಭೇಟಿ ನೀಡಿ ನೂತನ ವಿಮಾನ ನಿಲ್ದಾಣ ಉದ್ಘಾಟಿಸಿದ್ದಾರೆ. ಅಲ್ಲಿಯೇ ನಾಡಿನ ಧೀಮಂತ ನಾಯಕರಲ್ಲೊಬ್ಬರಾದ ಬಿ. ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಮಧ್ಯಾಹ್ನ ಇತ್ತ ಬೆಳಗಾವಿಗೂ ಆಗಮಿಸಿ ಬೃಹತ್ ಐತಿಹಾಸಿಕ ರೋಡ್ ಶೋ ನಡೆಸಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿರುವುದು ಗಮನಾರ್ಹ ಸಂಗತಿ.
ಅಂದು ದಿ. ಸುರೇಶ ಅಂಗಡಿಯವರ ಪಿಸುಮಾತಿಗೆ ಕಿವಿಗೊಟ್ಟ ಮೋದಿ ವರ ಚಿತ್ತ ಚಿತ್ರ ಗಮನ ಸೆಳೆದಿದೆ. ದಿವಂಗತ ಕೇಂದ್ರ ರೈಲ್ವೇ ಸಚಿವ ಸುರೇಶ ಅಂಗಡಿ ಅವರ ಹಲವು ಕನಸುಗಳಿಗೆ ಇಂದು ನಾಲ್ಕು ವರ್ಷಗಳ ಬಳಿಕ ಚಾಲನೆ ನೀಡಿದ್ದಾರೆ. ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಶಿವಮೊಗ್ಗೆ ವಿಮಾನ ನಿಲ್ದಾಣವನ್ನು ತಾವೇ ನವದೆಹಲಿಯಿಂದ ಆಗಮಿಸಿ ಪ್ರಧಾನಿ ವಿಮಾನ ಲ್ಯಾಂಡ್ ಮಾಡುವ ಮೂಲಕ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ.
ಕಾಕತಾಳೀಯವಾದರೂ ಏಳು ವರ್ಷದ ಹಿಂದಿನ ಈ ದಿನದ ಘಟನೆಗಳು ಸಾಮ್ಯತೆಯನ್ನು ಸಾರಿವೆ.