ಬಾರಮತಿ, ಸಾಂಗ್ಲಿ :
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಮಹಾರಾಷ್ಟ್ರ ಪ್ರವಾಸದ ವೇಳೆ ಕನ್ನಡದಲ್ಲೇ ಭಾಷಣ ಮಾಡಿ ಇದೀಗ ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬಾರಾಮತಿಯಲ್ಲಿ ನಡೆದ ಅಹಿಲ್ಯಾ ದೇವಿ ಅವರ 298ನೇ ಜನ್ಮದಿನಾಚರಣೆಯಲಿ ಸಿದ್ದರಾಮಯ್ಯ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದರು.
ಅವರ ಈ ಭಾಷಣವನ್ನು ಸ್ಥಳೀಯ ನಾಯಕರು ಮರಾಠಿಗೆ ಭಾಷಾಂತರ ಮಾಡಿದರು.
ಸಾಂಗ್ಲಿಯಲ್ಲಿ ನಡೆದ ಕಾಂಗ್ರೆಸ್ ಮಹಾ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಗಿಯಾದರು, ಸಮಾವೇಶದಲ್ಲಿ ಸಿದ್ದರಾಮಯ್ಯ ಕನ್ನಡದಲ್ಲೇ ಮಾತನಾಡಿದರು. ಮರಾಠಿ ಭಾಷಿಕರಿಗೆ ಅರ್ಥವಾಗಲು ಮರಾಠಿ ಭಾಷೆಗೆ ಅನುವಾದಿಸಲಾಯಿತು.
ಆಗಮಿಸಿದ ಸಹಸ್ರಾರು ಜನರನ್ನು ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿದರು. ಅವರನ್ನು ನೋಡಿದ ಜನ ಶಿಳ್ಳೆ ಹಾಗೂ ಚಪ್ಪಾಳೆ ಹೊಡೆದು ಸಂತಸ ವ್ಯಕ್ತಪಡಿಸಿದರು.