ಬೆಳಗಾವಿ :
ಖ್ಯಾತ ಸಾಹಿತಿಗಳ, ಕಲಾವಿದರ ಹೆಸರಿನಲ್ಲಿರುವ ಖಾಸಗಿ ಪ್ರತಿಷ್ಠಾನಗಳಿಗೆ ವಾರ್ಷಿಕ ಅನುದಾನ
ನೀಡುವದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಸಂಜೆ ಭರವಸೆ ನೀಡಿದ್ದಾರೆ.
ಕನ್ನಡ ಭವನದ ರಂಗಮಂದಿರ ಉದ್ಘಾಟನೆಗೆ ಆಗಮಿಸಿದ್ದ ಅವರನ್ನು ಸಾಹಿತಿಗಳು,ಕನ್ನಡ ಹೋರಾಟಗಾರರು ಭೆಟ್ಟಿಯಾಗಿ ಮನವಿ ಸಲ್ಲಿಸಿದಾಗ ಈ ಭರವಸೆ ನೀಡಿದರು.
ಖ್ಯಾತನಾಮರಾದ ಏಣಗಿ ಬಾಳಪ್ಪ,ಕೃಷ್ಣಮೂರ್ತಿ ಪುರಾಣಿಕ, ಡಿ ಎಸ್.ಕರ್ಕಿ,ಎಸ್.ಡಿ.ಇಂಚಲ,
ಬಿ.ಎ.ಸನದಿ ಮುಂತಾದವರ ಹೆಸರಿನಲ್ಲಿ ಅವರ ಅಭಿಮಾನಿಗಳು ಪ್ರತಿಷ್ಠಾನ ರಚಿಸಿಕೊಂಡರೆ ಕಾರ್ಯಕ್ರಮಗಳನ್ನು ನಡೆಸಲು ವಾರ್ಷಿಕ ಅನುದಾನ ನೀಡುವದಾಗಿ ಕಳೆದ ಫೆಬ್ರುವರಿ
ಮತ್ತು ಜುಲೈ ತಿಂಗಳಲ್ಲಿ ಮುಖ್ಯಮಂತ್ರಿಗಳು
ಬೆಂಗಳೂರಿನಲ್ಲಿ ಬೆಳಗಾವಿ ಸಾಹಿತಿಗಳ ಮತ್ತು ಕನ್ನಡ ಹೋರಾಟಗಾರರ ನಿಯೋಗಕ್ಕೆ ಭರವಸೆ ನೀಡಿದ್ದರು.
ನಿನ್ನೆ ಮುಖ್ಯಮಂತ್ರಿಗಳನ್ನು ಭೆಟ್ಟಿಯಾದ ನಿಯೋಗದಲ್ಲಿ ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ,ರಮೇಶ ಸೊಂಟಕ್ಕಿ, ಸಾಹಿತಿಗಳಾದ ಎ.ಎ.ಸನದಿ, ಕೆಂಪನ್ನವರ, ಬಸವರಾಜ ಗಾರ್ಗಿ,ಬಿ.ಎಸ್.ಗವಿಮಠ,ಸುಭಾಷ
ಏಣಗಿ ಮುಂತಾದವರು ಸೇರಿದ್ದಾರೆ.