ಬೆಂಗಳೂರು :
ರಾಜ್ಯ ಸರಕಾರ 7 ನೇ ವೇತನ ಆಯೋಗ ಜಾರಿಗೊಳಿಸುವ ಸಂಬಂಧ ಸಮಿತಿ ರಚಿಸಲು ತೀರ್ಮಾನಿಸಿದೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವಣಗೆರೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಇದಕ್ಕೆ ನೇತ್ರತ್ವ ವಹಿಸಲಿದ್ದಾರೆ. ಅವರ ಉಸ್ತುವಾರಿಯಲ್ಲಿ ಸರಕಾರಕ್ಕೆ ವರದಿ ನೀಡಿದ ಬಳಿಕ ನಿಯಮದಂತೆ ಏಳನೇ ವೇತನ ಆಯೋಗದ ರಚನೆಯ ಮುಂದಿನ ಪ್ರಕ್ರಿಯೆ ನಡೆಯಲಿವೆ.
ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಇತರ ಸೌಲಭ್ಯ ರಚನೆ ಕುರಿತು ಏಳನೇ ವೇತನ ಆಯೋಗ ಪ್ರಸ್ತಾಪಿಸಲಿದೆ.