This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಕನ್ನಡದ ಧ್ವನಿ ಕೋರೆ: ಸಿಎಂ ಬೊಮ್ಮಾಯಿ Kannada Voiceover: CM Bommai


ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ (ಅ.15) ನಡೆದ ಡಾ. ಪ್ರಭಾಕರ ಕೋರೆ ಅಮೃತ ಮಹೋತ್ಸವ ಸಮಾರಂಭದಲ್ಲಿ ಕೇಂದ್ರ- ರಾಜ್ಯ ಗಣ್ಯ ಮಾನ್ಯರು ಮಾತನಾಡಿದ್ದು ಹೀಗೆ….

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:ಕೆ.ಎಲ್.ಇ ಸಂಸ್ಥೆಯನ್ನು ವಿಶ್ವಮಾನ್ಯವಾಗಿ ಬೆಳೆಸಿರುವ ಕೀರ್ತಿ ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ. ಬದುಕಿನ ಎಲ್ಲಾ ಆಯಾಮಗಳ ಸಿನಿ ಲೋಕನ ಮಾಡುವ ತಾಣ ಇದಾಗಿದ್ದು, ಅವರು ನಡೆದು ಬಂದ ದಾರಿ ಗಮನಿಸಿದಾಗ, ಹಲವಾರು ಸವಾಲುಗಳನ್ನು ಎದುರಿಸಿ ಕರ್ಮೊಡದ ವಾತಾವರಣ ನಿಭಾಯಿಸಿ ಕೆ.ಎಲ್. ಇ ಸೊಸೈಟಿ ಪ್ರಗತಿ ಸಾಧಿಸಿದ ಬೆಳವಣಿಗೆಯ ಕೀರ್ತಿ ಅವರಿಗೆ ಸಲ್ಲುತ್ತದೆ.

ದೊಡ್ಡ ಯೂನಿವರ್ಸಿಟಿ ಯಾಗಿ ಪರಿವರ್ತನೆ ಮಾಡಿದ್ದಾರೆ. ಅದನ್ನು ಕಟ್ಟಲು ಅವರ ಶ್ರಮ ಬಹಳಷ್ಟಿದೆ. ಅವರ  ಯೋಜನೆ ಗ್ರಾಮೀಣ ಬಡ ಜನರಿಗೆ ಶಿಕ್ಷಣ ಒದಗಿಸುವುದು ಅವರ ಮುಖ್ಯ ಗುರಿಯಾಗಿತ್ತು. ಅವರ ರಾಜಕೀಯ ಜೀವನ ತ್ಯಾಗ ಮಾಡಿ ಈ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಸರ್ಕಾರ ಮಾಡುವ ಅನೇಕ ಕೆಲಸಗಳನ್ನು ಕೆ.ಎಲ್. ಇ ಸೊಸೈಟಿ ನಿರ್ವಹಿಸಿದೆ. ಇದರ ಮಾರ್ಗವಾಗಿ ಅನೇಕ ಸೊಸೈಟಿ, ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಿ ಉತ್ತಮ ಸೇವೆ ನೀಡುತ್ತಿವೆ.ಈ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಜಗತ್ತಿನ ಶಿಕ್ಷಣ ಕ್ಷೇತ್ರದಲ್ಲಿ ವೈದ್ಯಕೀಯ, ಕೃಷಿ ಸೇರದಂತೆ ತಂತ್ರಜ್ಞಾನ ಇಲ್ಲಿ ದೊರೆಯುತ್ತಿವೆ. ಹೊಸ ಆವಿಷ್ಕಾರಗಳನ್ನು ಹೊಸ ವಿಚಾರಗಳನ್ನು ಇವರು ಅಳವಡಿಸಿಕೊಂಡಿದ್ದಾರೆ.

ಪ್ರಭಾಕರ ಕೋರೆ, ಶ್ರಮ, ಕಾರ್ಯ ವೈಖರಿ, ಬದ್ಧತೆ ಮೂಲಕ ಕೆ.ಎಲ್.ಇ ಮಹತ್ತರ ಬೆಳವಣಿಗೆ ಕಂಡಿದೆ ಹಾಗೂ ಸೊಸೈಟಿ ಉಜ್ವಲ ಭವಿಷ್ಯ ನಿರ್ಮಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದರು. ರಾಜಕೀಯ, ಸಾಮಾಜಿಕ, ಧಾರ್ಮಿಕ, ಎಲ್ಲಾ ರಂಗಗಳಲ್ಲಿ ಅವರು ಪ್ರಭಾವಿ, ಹಾಗೂ ಆದರ್ಶ ವ್ಯಕ್ತಿತ್ವ ಹೊಂದಿದ್ದಾರೆ.

ಬುಲೆಟ್ ಮ್ಯಾನ್ ಎಂದು ಪ್ರಭಾಕರ ಕೋರೆ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬುಲೆಟ್ ಗುಂಡು ತಮ್ಮ ಶರೀರದಲ್ಲಿ ಇದ್ದರೂ ಅವರು ಸಾಮಾಜಿಕವಾಗಿ ಸರಳವಾಗಿ ಇದ್ದಿದ್ದರೂ ಇತರರಿಗೆ ಮಾದರಿ ಎಂದು ತಿಳಿಸಿದರು.

ಸಮಾಜ, ಸೊಸೈಟಿಗೆ ತಮ್ಮ ಬದುಕು ಮುಡುಪು ಇರುವುದಾಗಿ ಆ ಸಮಯದಲ್ಲಿ ಕೋರೆ ಅವರು ಭರವಸೆ ನೀಡಿದರು. ಸೂರ್ಯ ಚಂದ್ರ ಇರುವ ವರೆಗೂ ಪ್ರಭಾಕರ ಕೋರೆ ಅವರು ಹೆಸರು ಶಾಶ್ವತ  ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ:ಪ್ರಭಾಕರ ಕೋರೆ ಅವರ ಸಾಧನೆ ಅವಿಸ್ಮರಣಿಯ. ಅವರು ಬಡವರ ಪಾಲಿನ ದೇವರು ಆಗಿದ್ದಾರೆ. ಬೆಳಗಾವಿಗೆ ಅವರ ಸಾಧನೆ. ಅವರ ಸಾಧನೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಅವರು ಶಿಕ್ಷಣ ದೇವಾಲಯ ನಿರ್ಮಿಸಿ ಚಿನ್ನದ ಕಲಶ ವಾಗಿದ್ದಾರೆ. ಕನ್ನಡ ಕ್ಷೇತ್ರದಲ್ಲಿ ಅವರು ನಿರಂತರವಾಗಿದೆ.

ಬೆಳಗಾವಿಯ ಮೊಟ್ಟ ಮೊದಲ ಅಧಿವೇಶನಕ್ಕೆ ಚರ್ಚೆಯಲ್ಲಿ ನಡೆದಾಗ ಮೊದಲು ಬಾಗವಹಿಸಿ ಸ್ಥಳಾವಕಾಶ ಕೊಟ್ಟು ಸಹಾಯ ಹಸ್ತ ನೀಡಿದರು. ವಿಶ್ವ ಕನ್ನಡ ಸಮ್ಮೇಳನ ದಲ್ಲಿ ಕೂಡ ಅವರು ಬಹಳ ಸಹಾಯಹಸ್ತ ಚಾಚಿದ್ದಾರೆ ಎಂದು ಹೇಳಿದರು.

ಸರಳ, ಸಮನ್ವಯತೆಯ ವ್ಯಕ್ತಿತ್ವ ಅವರದ್ದು, ಬ್ಯಾಂಕಿಂಗ್, ಸಕ್ಕರೆ ಕಾರ್ಖಾನೆ, ಶಿಕ್ಷಣ, ವೈದ್ಯಕೀಯ ಹೀಗೆ ಅವರ ಸೇವೆಯಿಂದ ಕೀರ್ತಿ ಬಾನೆತ್ತರಕ್ಕೆ ಹಾರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ:ಸುಮಾರು 12 ವರ್ಷಗಳಿಂದ ಪರ್ಲಿಮೆಟ್ ನಲ್ಲಿ ಕಾರ್ಯ ನಿರ್ವಹಿಸಿದ್ದೇವೆ. ಎಲ್ಲಾ ವರ್ಗಗಳ ಜನರಿಗೆ ಶಿಕ್ಷಣ ನೀಡಲಾಗುತ್ತದೆ. ಬಹುತೇಕ ಸಾಧಕರು, ಉನ್ನತ ಅಧಿಕಾರಿಗಳು, ಕೆ.ಎಲ್. ಇ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಸಾಧನೆಗೈದಿದ್ದಾರೆ.

ಕನ್ನಡ ಭಾಷೆಗೆ ದುಡಿದಿದ್ದಾರೆ.
ಎಲ್ಲಾ ವರ್ಗದವರ ಜೊತೆಗೆ ಬೆರೆಯುವ ಅತ್ಯಂತ ಸರಳ ವ್ಯಕ್ತಿತ್ವ, ಸಂಸ್ಥೆಯ ಮೂಲಕ ಅನೇಕ ಬಡ ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಅದೇ ರೀತಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ಶಿಕ್ಷಣ ನೀಡಿದ್ದಾರೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್:ಪ್ರಭಾಕರ ಕೋರೆ ಕೇವಲ ಒಬ್ಬ ಉದ್ಯಮಿ ಮಾತ್ರವಲ್ಲ, ಶಿಕ್ಷಣ, ವೈದ್ಯಕೀಯ, ಜನ, ಸಮಾಜ ಸೇವೆ, ರಾಜಕೀಯ ಸೇರಿದಂತೆ ಎಲ್ಲಾ ವಲಯದಲ್ಲಿ ಹೆಸರುವಾಸಿ ವ್ಯಕ್ತಿತ್ವ ವರದ್ದು. ದೇಶ, ವಿದೇಶದಲ್ಲಿ ಅವರ ಹೆಸರು ಚಿರ ಪರಿಚಿತ ಎಂದು ಹೇಳಿದರು.

2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಲ್ಲಾ ವಲಯದಲ್ಲಿ ಸಮಾಜ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅದೇ ರೀತಿಯಲ್ಲಿ ಕೆ.ಎಲ್. ಇ ಶಿಕ್ಷಣ ಸಂಸ್ಥೆ ಕೂಡ ಈ ಶಿಕ್ಷಣ ನೀತಿ ಅನುಷ್ಠಾನಗೊಳಿಸಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಲಿದೆ ಎಂದು ಧರ್ಮೇಂದ್ರ ಪ್ರಧಾನ ಅವರು ತಿಳಿಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಗಿಮಠ ಅವರು ಪ್ರಾಥಮಿಕವಾಗಿ ಮಾತನಾಡಿ ವಿವಿಧ ಚಿಕಿತ್ಸೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೆ.ಎಲ್. ಇ ಸಂಸ್ಥೆ ಇದಾಗಿದೆ. ಬೆಳಗಾವಿಯ ದಕ್ಷಿಣ ಭಾಗದ ಜನರಿಗೆ ಯಳ್ಳೂರು ನಲ್ಲಿ 500 ಬೆಡ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಭಾಗಗಳಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುವದು ಎಂದು ತಿಳಿಸಿದರು.

ಕೆ.ಎಲ್. ಇ ಸಂಸ್ಥಾಪಕ ಪ್ರಭಾಕರ ಕೋರೆ 75 ನೇ ಅಮೃತ ಮಹೋತ್ಸವ ಅಂಗವಾಗಿ ಅವರ ಜೀವನ ಚರಿತ್ರೆ, ವಿವಿಧ ಕ್ಷೇತ್ರಗಳಲ್ಲಿ ಸಾಧೆಗೈದ ಕುರಿತು ಪುಸ್ತಕ ಬಿಡುಗಡೆ ಮಾಡಲಾಯಿತು. ಬಳಿಕ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಡಾ.ಪ್ರಭಾಕರ ಕೋರೆ ಹಾಗೂ ಪತ್ನಿ ಆಶಾತಾಯಿ ಕೋರೆ ಅವರಿಗೆ ಗೌರವಿಸಿ, ಸನ್ಮಾನಿಸಲಾಯಿತು.
ಡಾ. ಪ್ರಭಾಕರ ಕೋರೆ ಅವರಿಗೆ
ಗ್ರಂಥ, ಪುಸ್ತಕ ತುಲಾಭಾರ ಮಾಡಲಾಯಿತು.

ಪ್ರಭಾಕರ ಕೋರೆ, ಕೆ.ಎಲ್. ಇ ಆಜೀವ ಸದಸ್ಯೆ ಆಶಾತಾಯಿ ಕೋರೆ, ಕೇಂದ್ರ ಸಂಸದೀಯ ಹಾಗೂ ಕಲ್ಲಿದ್ದಲು, ಗಣಿ ಸಚಿವ ಪ್ರಹ್ಲಾದ ಜೋಶಿ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ, ಜಗದೀಶ್ ಶೆಟ್ಟರ್ ಮಾಜಿ ಸಚಿವ ಆರ್.ವಿ ದೇಶಪಾಂಡೆ, ಕೇಂದ್ರ ಸರ್ಕಾರದ ಶಿಕ್ಷಣ ಕೌಶಲ್ಯ ಸಚಿವರು ಧರ್ಮೇಂದ್ರ ಪ್ರಧಾನ್ , ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಾಮೋದ ಸಾವಂತ್,
ಮಹಾರಾಷ್ಟ್ರ ರಾಜ್ಯದ ಕಂದಾಯ ಪಶು ಸಂಗೋಪನಾ ಹೈನುಗಾರಿಕೆ ಸಚಿವರು,
ಸೊಲ್ಲಾಪುರ ಸಂಸದ ಜಯ ಸಿದ್ದೇಶ್ವರ ಸ್ವಾಮಿ,
ಕಾಗವಾಡ ಶಾಸಕ ಶ್ರೀಮಂತ ಪಾಟೀಲ,
ಪ್ರಾಥಮಿಕ, ಪ್ರೌಡ ಶಿಕ್ಷಣ ಸಚಿವ ಬಿ.ಸಿ ನಾಶೇಶ್,
ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ,
ಸಾರಿಗೆ ಸಚಿವ ಲಕ್ಷ್ಮಣ ಸವದಿ,
ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ
ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ, ನಗರಾಭಿವೃದ್ದಿ ಸಚಿವರು ಬೈರತಿ ಬಸವರಾಜ,
ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ,ಸಂಸದೆ ಮಂಗಳಾ ಅಂಗಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ, ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ,ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೊಲೀಸ್ ಆಯುಕ್ತರಾದ ಡಾ.ಎಂ. ಬಿ ಬೋರಲಿಂಗಯ್ಯ ಹಾಜರಿದ್ದರು.

ಬೈಲಹೊಂಗಲ ಸಚಿವರಾದ ಮಹಾಂತೇಶ ಕೌಜಲಗಿ ಸ್ವಾಗತ ಕೋರಿದರು


Jana Jeevala
the authorJana Jeevala

Leave a Reply