ಬೆಳಗಾವಿ :
ನಿನ್ನೆ ನಿಧನರಾದ ವಿಧಾನ ಸಭಾ ಉಪಾಧ್ಯಕ್ಷ ಆನಂದ ಮಾಮನಿ ಅವರ ಅಂತ್ಯಸಂಸ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಇಂದು ಮಧ್ಯಾಹ್ನ ಸವದತ್ತಿಗೆ ಆಗಮಿಸುವರು.
ಈ ಹಿನ್ನಲೆಯಲ್ಲಿ ಆಯೋಜಿತವಾಗಿದ್ದ ಕಲ್ಬುರ್ಗಿ ಜಿಲ್ಲೆಯ ಪ್ರವಾಸವನ್ನು ಮುಖ್ಯಮಂತ್ರಿಯವರು ರದ್ದುಗೊಳಿಸಿದ್ದಾರೆ.
ಆನಂದ ಮಾಮನಿ ಅವರ ಅಂತ್ಯಕ್ರಿಯೆಗೆ ರಾಜ್ಯದ ಬಿಜೆಪಿ ನಾಯಕರು, ಶಾಸಕರು ಹಾಗೂ ಅಭಿಮಾನಿಗಳು ಸವದತ್ತಿಗೆ ತೆರಳುತ್ತಿದ್ದಾರೆ.