ಬೆಳಗಾವಿ :
ಕ್ಯಾಸಲ್ ರಾಕ್ ಮತ್ತು ಕರಂಜೋಲ್ ರೈಲ್ವೆ ನಿಲ್ದಾಣದ ಬಳಿ ರೈಲ್ವೆಯ ಸುರಂಗ ಮಾರ್ಗದಲ್ಲಿ ರೈಲ್ವೆ ಹಳಿಗಳ ಮೇಲೆ ಗುಡ್ಡ ಕುಸಿತ ಉಂಟಾಗಿ ರೈಲು ಸಂಚಾರ ಅಸ್ತವ್ಯಸ್ತವಾಗಿತ್ತು. ಕೊನೆಗೂ ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದ ಮಣ್ಣು ಮತ್ತು ಮರಗಳನ್ನು ರೈಲ್ವೆ ಇಲಾಖೆ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.
ಇದೀಗ ಅಂತಿಮ ಹಂತದ ಕಾರ್ಯಾಚರಣೆ ನಡೆದಿದ್ದು ರೈಲ್ವೆ ಹಳಿಗಳ ಜೋಡಣೆ ಮತ್ತು ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ರೈಲು ಓಡಾಟ ಎಂದಿನಂತೆ ಆರಂಭವಾಗಲಿದೆ. ಭಾರೀ ಮಳೆಯಿಂದಾಗಿ ಕಳೆದ ನಾಲ್ಕು ದಿನದಿಂದ ಸಂಚಾರ ನಡೆಸುತ್ತಿದ್ದ ಎಲ್ಲಾ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು.
ಗೋವಾಕ್ಕೆ ಪ್ರಯಾಣ ಮಾಡಬೇಕಿದ್ದರೆ ತೊಂದರೆ ಅನುಭವಿಸಬೇಕಾಗಿತ್ತು. ಆದರೆ ಈಗ ದುರಸ್ತಿ ಕಾರ್ಯದಿಂದ ಮತ್ತೆ ರೈಲ್ವೆ ಸಂಚಾರ ಪುನರಾರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.