- ಉಚಗಾಂವಿ ಕನಕದಾಸ ಜಯಂತಿ ಮೆರವಣಿಯಲ್ಲಿ ಮಾರಾಮಾರಿ..!
ಪಟಾಕಿ ಹಚ್ಚಿದಕ್ಕೆ ಡೊಳ್ಳಿನ ಗುನಿಯಿಂದ ಪರಸ್ಪರ ಬಡದಾಡಿಕೊಂಡ ಯುವಕರು..?
20 ಜನರ ವಿರುದ್ಧ 307, ಹಿಂಡಲಗಾ ಸೇರಿದ 15 ಜನ..!
ಬೆಳಗಾವಿ : ನಿನ್ನೆ (ಭಾನುವಾರ) ತಾಲೂಕಿನ ಉಚಗಾಂವಿ ಗ್ರಾಮದಲ್ಲಿ ಕನಕದಾಸ ಜಯಂತಿ ನಿಮಿತ್ತ ಪೊಲೀಸರಿಂದ ಯಾವುದೇ ಪರವಾನಿಗೆ ಪಡೆಯದೆ ಹಮ್ಮಿಕೊಂಡ ಮೆರವಣಿಗೆಯಲ್ಲಿ ಪಟಾಕಿ ಸಿಡಿಸಿದ ಕ್ಷುಲ್ಲಕ ಕಾರಣಕ್ಕಾಗಿ ಒಂದೇ ಕೋಮಿನ ಎರಡು ಗುಂಪುಗಳು ಮಧ್ಯೆ ಮಾರಾಮಾರಿ ನಡೆದಿದೆ. ಇದರಲ್ಲಿ ಪ್ರತ್ಯೇಕ ಗುಂಪಿನ ಒಬ್ಬೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಹಲ್ಲೆ ನಡೆಸಿರುವ ಎರಡು ಗುಂಪಿನ 20 ಜನರ ವಿರುದ್ಧ ಕೊಲೆಯತ್ನ ಹಾಗೂ ನಾನಾ ಆರೋಪದಡಿ ಪ್ರಕರಣ ದಾಖಲಿಸಿ, ಸುಮಾರು 15 ಜನ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಕಾಕತಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಗಿದ್ದೇನು..?
ಭಾನುವಾರ ಸಾಯಂಕಾಲ ಕನಕದಾಸ ಜಯಂತಿ ನಿಮಿತ್ತ ತಡವಾಗಿ ಪೊಲೀಸ್ ಪರವಾನಿಗೆ ಪಡೆಯದೆ ಮೆರವಣಿಗೆ ನಡೆಸಿದ್ದಾರೆ. ಸಮಯದಲ್ಲಿ ಸಂತೋಷ ನಿಂಗಪ್ಪಾ ಕುರಬರ ಎಂಬಾತ ಪಟಾಕಿ ಹಚ್ಚಿದಕ್ಕೆ ಎರಡು ಗುಂಪಿನ ಮಧ್ಯೆ ಜಗಳ ನಡೆದಿದೆ. ನಂತರ ಮೆರವಣಿಗೆ ಮುಗಿದು ಊಟ ಮಾಡುವ ಸಮಯದಲ್ಲಿ ಈ ಮಾರಾಮಾರಿ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.
ಈ ಮಾರಾಮಾರಿಯಲ್ಲಿ ಮೊದಲಿಗೆ ಸುನೀಲ ಭರವಾ ಕುರುಬರ ವಯಾ 26 ವರ್ಷ ಸಾ: ಉಚಗಾಂವ ಎಂಬಾತನ ಮೇಲೆ ಇನ್ನೊಂದು ಗುಂಪಿನವರಾದ
1)ವಿನೋದ ರಾಯಪ್ಪಾ ಕುರಬರ (25)
2) ಸಂತೋಷ, ನಿಂಗಪ್ಪ ಕುರುಬರ, ದಯಾ 35 ವರ್ಷ,
3] ಬೀರಪ್ಪ ಶೆಟ್ಟೆಪ್ಪ ಕುರುಬರ, ವಯಾ 28 ವರ್ಷ,
4] ಮಾಳಪ್ಪ ಸಿದ್ದಪ್ಪ ಕುರುಬರ ವಯಾ: 25 ವರ್ಷ
5] ಉಮೇಶ ಭರಮಾ ಕುರುಬರ ವಯಾ 27 ವರ್ಷ,
6) ನಾಗರಾಜ ಪರುಶರಾಮ ಕಟಬುಗೊಳ, ವಯಾ 23 ವರ್ಷ,
7] ಸುರೇಶ ರಾಯಪ್ಪ ಕುರುಬರ ವಯಾ: 27 ವರ್ಷ,
8] ಯಲ್ಲಪ್ಪ ಲಕ್ಷಣ ಕುರುಬರ ವಯಾ 45 ವರ್ಷ
9) ಬೀರಪ್ಪ ಸಿದ್ದಪ್ಪ ಕುರುಬರ ವಯಾ: 27 ವರ್ಷ,
10) ಭರಮಾ ಲಕ್ಷ್ಮಣ ಕುರುಬರ ವಯಾ 55 ವರ್ಷ, ಸಾ: ಎಲ್ಲರೂ ಉಚಗಾಂವ ಗ್ರಾಮದವರ ಸೇರಿಕೊಂಡು ಹಲ್ಲೆ ಮಾಡಿದ್ದರಿಂದ ಆತ ಗಾಯಗೊಂಡಿದ್ದಾರೆ.
ಇದರ ಬೆನ್ನಲ್ಲೇ ಮೊದಲು ಹಲ್ಲೆ ಮಾಡಿದ ಗುಂಪಿನ ಕಡೆಯವನಾದ 29 ವರ್ಷದ ಬೀರಪ್ಪಾ ಶೆಟ್ಟೆಪ್ಪಾ ಕುರಬರ ಎಂಬಾತನ ಮೇಲೆ ವಿರೋಧಿ ಗುಂಪಿನ 10 ಜನರಾದ
1) ವಿಠ್ಠಲ ವಿಠ್ಠಲ ರಾಜಗೋಳಕರ
2] ಲಕ್ಷಣ ವಿಠ್ಠಲ ರಾಜಗೋಳಕರ,
4] ಉಮೇಶ ಮಲ್ಲಪ್ಪ ರಾಜಗೋಳಕರ,
5)ಆನಂದ ಸಿದ್ದಪ್ಪಾ ರಾಜಗೋಳಕರ
6)ರಾಜು ಆನಂದ ರಾಜಗೋಳಕರ
7) ಯಲ್ಲಪ್ಪ ಕರೇಪ್ಪ ರಾಜಗೋಳಕರ
8) ಲಕ್ಷಣ ಕರೇಪ್ಪ ರಾಜಗೋಳಕರ
9)ವಿಕ್ರಮ ನಾಗೇಶ ರಾಜಗೋಳಕರ
10) ವಿಠ್ಠಲ ಮಲ್ಲಪ್ಪ ಗಾಜಗೋಳಕರ ಸಾ॥ ಉಚಗಾಂವಿಯವರು ಸೇರಿಕೊಂಡು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಗುಂಪಿನ ತಲಾ 10 ಜನರ ವಿರುದ್ಧ ಸೇರಿ ಎರಡು ಗುಂಪಿನ ಒಟ್ಟು 20 ಜನರ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿರುವ ಕಾಕತಿ ಪೊಲೀಸರು ಎಸಿಪಿ ಎಸ್ ವಿ ಗಿರೀಶ್ ,ಪಿಐ ಗುರುನಾಥ ಐ ಎಸ್, ಪಿಎಸ್ಐ ಮಂಜುನಾಥ ಹುಲಕುಂದ ಹಾಗೂ ಸಿಬ್ಬಂದಿಗಳು ಒಟ್ಟು 15 ಜನ ಆರೋಪಿಗಳನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳಿಸಿದ್ದಾರೆ.
ಹಾಗೂ ಪರಾರಿಯಾಗಿರುವ 5 ಜನ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಪರವಾನಿಗೆ ಪಡೆಯದೆ ನಡೆಸಿದ್ದ ಈ ಮೆರವಣಿಗೆಯಿಂದಾಗಿ ಗ್ರಾಮದಲ್ಲಿ ಹಾಳಾಗಿದ್ದ ಶಾಂತಿ ಸುವ್ಯವಸ್ಥೆಯನ್ನು ಮರಳಿ ಕಾಪಾಡುವಲ್ಲಿ ಕಾಕತಿ ಪೊಲೀಸರು ಯಶಸ್ವಿಯಾಗಿದ್ದಾರೆ.