ಬೆಳಗಾವಿ: ರಾಯಬಾಗದಲ್ಲಿ ಬಾಲಕಿಗೆ ಡ್ರಾಪ್ ಕೊಡುವ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಸುನಿಲ್ ದೀಪಾಳೆ ಎಂಬಾತ ಬಾಲಕಿಯನ್ನು ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿದ್ದಾನೆ. ಆಗ ಬಾಲಕಿ ಏಕಾಏಕಿ ಕೂಗಿದ್ದರಿಂದ ನಾಗರಿಕರು ಧಾವಿಸಿ ಬಂದು ಆತನನ್ನು ಹಿಡಿದು ಥಳಿಸಿದ್ದಾರೆ.

ಘಟನೆ : ಶಾಲಾ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಹಿಡಿದು ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ರಾಯಬಾಗ ಪಟ್ಟಣದ ಕೈರಕೋಡಿ ನಿವಾಸಿ ಸುನೀಲ್ ದೀಪಾಳೆ ಎಂಬಾತನಿಂದ ಕೃತ್ಯ ನಡೆದಿದೆ.
ಸುನೀಲ್ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಪಟ್ಟಣದ ಕಂಚರವಾಡಿ ರೋಡ್ ಕಡೆಯಿಂದ ತೆರಳುತ್ತಿದ್ದಳು. ಆಗ ಬಾಲಕಿಗೆ ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ಮೇಲೆ ಕೂರಿಸಿಕೊಂಡಿದ್ದಾನೆ. ನಂತರ ನಿರ್ಜನ ಪ್ರದೇಶದ ಕಡೆಗೆ ಕರೆದ್ಯೊಯಲು ಯತ್ನಿಸಿದ್ದಾನೆ. ಇದರಿಂದ ಗಾಬರಿಗೊಂಡ ಬಾಲಕಿ ಗಾಡಿ ನಿಲ್ಲಿಸಲು ಹೇಳಿದ್ದಾಳೆ. ಆದರೆ ನಿಲ್ಲಿಸದೇ ಇದ್ದಾಗ ಬಾಲಕಿ ಕಿರುಚಾಡಿದ್ದಾಳೆ. ಆಕೆಯ ಕಿರುಚಾಟ ಕೇಳಿ ಸ್ಥಳಕ್ಕೆ ಸ್ಥಳೀಯರು ದೌಡಾಯಿಸಿದ್ದಾರೆ.
ಕೂಡಲೇ ಸುನೀಲ್ನನ್ನು ಹಿಡಿದುಕೊಂಡ ಸ್ಥಳೀಯರು ಅತ್ಯಾಚಾರಕ್ಕೆ ಯತ್ನಿಸಿದ್ದು ತಿಳಿಯುತ್ತಿದ್ದಂತೆ ಧರ್ಮದೇಟು ನೀಡಿ ರಾಯಬಾಗ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗೆ ರಾಯಬಾಗ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ರಾಯಬಾಗ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ : ಧರ್ಮದೇಟು ನೀಡಿದ ನಾಗರಿಕರು
