ಖಾನಾಪುರ: ಖಾನಾಪುರ ತಾಲೂಕು ಗೌಳಿವಾಡಕ್ಕೆ ವಿದ್ಯುತ್ ವ್ಯವಸ್ಥೆ ಮಾಡಿಕೊಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ಖಾನಾಪುರ ತಾಲೂಕು ನಂದಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗೌಳಿವಾಡ ನಂದಗಡ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿರುತ್ತೇವೆ. ನಮ್ಮ ಜನಸಂಖ್ಯೆ150 ರಿಂದ 200 ವರೆಗೆ ಇರುತ್ತದೆ. ನಮ್ಮ ಕುಟುಂಬದ 10 ಪಂಚಾಯತಿ ಉತಾರಗಳು ಇರುತ್ತವೆ. ಪ್ರತಿ ವರ್ಷ ಮನೆಯ ಕರ ಪಟ್ಟಿ ಪಂಚಾಯತಿಗೆ ತುಂಬುತ್ತೇವೆ.
ಆದರೆ ನಾವು ವಾಸವಾಗಿದ್ದ ಜಾಗದಲ್ಲಿ ವಿದ್ಯುತ್ ಇರುವುದಿಲ್ಲ. ವಿದ್ಯುತ್ ಇಲ್ಲದೇ ಇರುವುದರಿಂದ ನಮ್ಮ ಮಕ್ಕಳ ವಿದ್ಯಾಭ್ಯಾಸ ಮಾಡಲು ಸಾಧ್ಯ ಆಗುತ್ತಿಲ್ಲ. ನಾವು ಇದ್ದ ಸ್ಥಳದಲ್ಲಿ ನಮಗೆ ಕರೆಂಟ್ ಕಂಬ ಹಾಕಿ ಕರೆಂಟ್ ಮೀಟರ್ ಮಂಜೂರು ಮಾಡಿ ಮತ್ತು ವಿದ್ಯುತ್ ಸೌಕರ್ಯ ಮಾಡಿಕೊಡಬೇಕು ಎಂದು ಮನವಿ ಮಾಡಿದರು.


