ಖಾನಾಪುರ: ಖಾನಾಪುರ ತಾಲೂಕು ಮೋದಿಗೊಪ್ಪ ಗ್ರಾಮಕ್ಕೆ ಇದೀಗ ನೂತನವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ನಾಗರಿಕರು ಗ್ರಾಮೀಣ ಭಾಗಕ್ಕೆ ಬಸ್ ವ್ಯವಸ್ಥೆ ಮಾಡಲು ಶ್ರಮಿಸಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರ ಮೋದ ಕೊಚೇರಿ ಅವರನ್ನು ಗ್ರಾಮದಲ್ಲಿ ಸನ್ಮಾನಿಸಿದರು.
ಗ್ರಾಮದ ಯಾವುದೇ ಸಮಸ್ಯೆ ಇದ್ದರೂ ಪ್ರಮೋದ ಕೊಚೇರಿ ಅವರು ತಕ್ಷಣ ಸ್ಪಂದಿಸುತ್ತಾರೆ. ಅವರು ಜನರ ಬೇಕು ಬೇಡಗಳಿಗೆ ಧ್ವನಿಯಾಗಿದ್ದಾರೆ ಎಂದು ಗ್ರಾಮಸ್ಥರು ಅವರ ಸೇವೆಯನ್ನು ಅಭಿನಂದಿಸಿದರು.