ದೆಹಲಿ :
12 ವಯೋಮಾನಕ್ಕಿಂತ ಕಡಿಮೆ ವಯಸ್ಸಿನ ಶೇಕಡ 42 ರಷ್ಟು ಮಕ್ಕಳು ಪ್ರತಿದಿನ ಎರಡರಿಂದ ನಾಲ್ಕು ಗಂಟೆ ಮೊಬೈಲ್, ಟ್ಯಾಬ್ಲೆಟ್ ನಲ್ಲಿ ಸಮಯ ಕಳೆಯುತ್ತಿದ್ದಾರೆ ಎಂದು ಹ್ಯಾಪಿನೆಟ್ಜ್ ಸಮೀಕ್ಷೆ ವರದಿ ತಿಳಿಸಿದೆ.
ಸಮೀಕ್ಷೆಯಲ್ಲಿ 12 ಕ್ಕಿಂತ ಹೆಚ್ಚಿನ ವಯಸ್ಸಿನವರು ದಿನದ ಶೇಕಡಾ 47 ರಷ್ಟು ಸಮಯ ಮೊಬೈಲ್ ನಲ್ಲಿ ಕಳೆಯುತ್ತಾರೆ. 12 ಮತ್ತು ಹೆಚ್ಚಿನ ವಯೋಮಾನದ ಶೇಕಡಾ 69 ರಷ್ಟು ಮಕ್ಕಳು ತಮ್ಮ ಸ್ವಂತ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಹೊಂದಿದ್ದು ಅದರ ಅಂತರ್ಜಾಲ ಬಳಕೆಗೆ ನಿರ್ಬಂಧಿತ ಅನುಮತಿ ಪಡೆದಿದ್ದಾರೆ ಎಂದು ಸಂಸ್ಥೆಯು ಒಂದೂವರೆ ಸಾವಿರ ಪೋಷಕರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಮನರಂಜನೆಗೆ ಮಕ್ಕಳು ದಿನದ ಎರಡರಿಂದ ನಾಲ್ಕು ಗಂಟೆ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇನ್ನು ಹೆಚ್ಚಿನ ವಯಸ್ಸಿನವರು ದಿನದ ಶೇ. 47 ರಷ್ಟು ಸಮಯವನ್ನು ಮೊಬೈಲ್ ನಲ್ಲಿ ವ್ಯಯಿಸುತ್ತಿದ್ದಾರೆ.