ಬೆಳಗಾವಿ:
ನಾಯಿ ಕಡಿತದಿಂದ ಮೃತಪಟ್ಟ ಖಾನಾಪುರ ತಾಲೂಕಿನ ಗೋಧೋಳಿ ಗ್ರಾಮದ ಬಾಲಕಿಯ ಕುಟುಂಬಕ್ಕೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಆರ್ಥಿಕ ನೆರವು ನೀಡಿದರು.
ನಾರಾಯಣ ಕದಮ್ ಅವರ 5 ವರ್ಷದ ಮಗಳು ಮನೆ ಕಟ್ಟೆಯ ಮೇಲೆ ಆಟ ಆಡುವ ಸಮಯದಲ್ಲಿ ನಾಯಿ ಕತ್ತಿನ ಭಾಗಕ್ಕೆ ಬಲವಾಗಿ ಕಚ್ಚಿರುವ ಕಾರಣ ಮಗುವಿನ ಮೆದುಳಿಗೆ ಇನ್ಫೆಕ್ಷನ್ ಆಗಿ ಯಾವುದೇ ಚಿಕಿತ್ಸೆ ಫಲಕಾರಿಯಾಗದೇ ಮಗು ಕೊನೆಯುಸಿರೆಳೆದಿದೆ.
ಆ ಮಗುವಿನ ತಂದೆ, ತಾಯಿಗೆ ಸಾಂತ್ವನವನ್ನು ಹೇಳಿ, ಧೈರ್ಯ ತುಂಬಿದ ಲಕ್ಷ್ಮೀ ಹೆಬ್ಬಾಳಕರ್, ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ 50 ಸಾವಿರ ರೂ. ಚೆಕ್ ನೀಡಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು.