ಧಾರವಾಡ :
ಕೇಂದ್ರ ಸರ್ಕಾರಕ್ಕೆ ಮಹದಾಯಿ ಯೋಜನೆಯ ಬಗ್ಗೆ ಆಸಕ್ತಿ ಇಲ್ಲ . ಅರಣ್ಯ ಮತ್ತು ಪರಿಸರ ತೀರುವಳಿ ನೀಡಿದರೆ, ನಾಳೆಯೇ ಟೆಂಡರ್ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅವರು ಇಂದು ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬೆಣ್ಣಿಹಳ್ಳದ ಜೊತೆಗೆ ತುಪ್ಪರಿಹಳ್ಳ ಯೋಜನೆಯನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.