ಬೆಳಗಾವಿ :; ಸಾಹಿತ್ಯ ಸಂವಾದ ಮತ್ತು ಕನ್ನಡ ಭವನದ ವತಿಯಿಂದ ಛತ್ರಪತಿ ಶಿವಾಜಿ ಕೃತಿ ಲೋಕಾರ್ಪಣೆ ಮೇ 18ರಂದು ಬೆಳಗ್ಗೆ 10:30ಕ್ಕೆ ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕಾರ್ಯಕ್ರಮಕ್ಕೆ ಚಾಲನೆ ನೀಡುವವರು. ಕಾರ್ಮಿಕ ಸಚಿವ ಸಂತೋಷ ಲಾಡ್ ಕೃತಿ ಲೋಕಾರ್ಪಣೆ ಮಾಡುವವರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ನಾಡೋಜ ಮನು ಬಳಿಗಾರ ಅಧ್ಯಕ್ಷತೆ ವಹಿಸುವರು. ಡಾ. ಗುರುದೇವಿ ಹುಲೆಪ್ಪನವರಮಠ, ಯ.ರು.ಪಾಟೀಲ ಕೃತಿ ಪರಿಚಯಿಸುವವರು. ಕೃತಿಯ ಲೇಖಕ ಡಾ.ಸರಜೂ ಕಾಟ್ಕರ್ ಉಪಸ್ಥಿತರಿರುವರು.
ಛತ್ರಪತಿ ಶಿವಾಜಿ ಕೃತಿ ಲೋಕಾರ್ಪಣೆ ರವಿವಾರ
