ಬೆಳಗಾವಿ: ಕರ್ನಾಟಕ ವಿಧ್ಯುಚ್ಛಕ್ತಿ ಆಯೋಗ, ಹುಬ್ಬಳ್ಳಿ ಸರಬರಾಜು ಕಂಪನಿ ನಿಯಮಿತದ ಆರ್ಥಿಕ ವರ್ಷದ 2025-26 ರಿಂದ 2027-28ರ ಅವಧಿಯ ವಿಧ್ಯುತ್ ದರ ಪರಿಷ್ಕರಣಾ ಅರ್ಜಿಯ ಸಂಬಂಧ ಪಿ.ಬಿ.ರಸ್ತೆ, ನವನಗರ ಹುಬ್ಬಳ್ಳಿಯಲ್ಲಿರುವ ಹುಬ್ಬಳ್ಳಿ ವಿಧ್ಯುತ್ ಸರಬರಾಜು ಕಂಪನಿ ನಿಯಮಿತ, ನಿಗಮ ಕಚೇರಿ ನೂತನ ಸಭಾಂಗಣ ಕೊಠಡಿಯಲ್ಲಿ ಸಾರ್ವಜನಿಕ ವಿಚಾರಣೆ ಸಭೆಯನ್ನು ದಿನಾಂಕ:27-02-2025 ರ ಗುರುವಾರ ಮುಂಜಾನೆ 11 ಗಂಟೆಗೆ ನಿಗದಿಯಾದ ಸಮಯವನ್ನು ಅದೇ ದಿನ ಮುಂಜಾನೆ 10.30 ಗಂಟೆಗೆ ಮರುನಿಗಿದಯಾಗಿದ್ದು ಆಸಕ್ತರು ಸಾರ್ವಜನಿಕ ವಿಚಾರಣೆಯಲ್ಲಿ ಭಾಗವಹಿಸಿ ತಮ್ಮ ಸಲಹೆಗಳನ್ನು ಮೌಖಿಕ ಅಥವಾ ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ ಎಂದು ಹು.ವಿ.ಸ.ಕಂ.ನಿ. ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.