ನವದೆಹಲಿ: ವಿಧಾನಸಭೆ ಚುನಾವಣೆ ಎದುರಿಸಲಿರುವ ಹರಿಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೇಟಿ ನೀಡಲಿದ್ದಾರೆ. ಚುನಾವಣೆಯ ಮೇಲೆ ಕಣ್ಣಿಟ್ಟು ಅವರು ಈ ಭೇಟಿಗೆ ಸಜ್ಜಾಗಿದ್ದಾರೆ.
ಜುಲೈ 29ರಂದು ಹರಿಯಾಣಕ್ಕೆ, ಜುಲೈ 5ರಂದು ಮಹಾರಾಷ್ಟ್ರಕ್ಕೆ ಅವರು ಭೇಟಿ ನೀಡಲಿದ್ದು ನಂತರದಲ್ಲಿ ಜಾರ್ಖಂಡ್ ಭೇಟಿ ನಿಗದಿಯಾಗಿದೆ ಎಂದು ಮೂಲಗಳು ಹೇಳಿವೆ. ಹರಿಯಾಣದ ಪಂಚಕುಲಾದಲ್ಲಿ ಶಾ ಅವರು ಪಕ್ಷದ ನಾಯಕರನ್ನು ಭೇಟಿ ಮಾಡಲಿದ್ದಾರೆ.
2014ರ ಲೋಕಸಭಾ ಚುನಾವಣೆಗೂ ಮುನ್ನ ಅಮಿತ್ ಶಾ ಅವರು ಉತ್ತರ ಪ್ರದೇಶಕ್ಕೆ ತೆರಳಿ ಚುನಾವಣಾ ರಣತಂತ್ರ ರೂಪಿಸಿ ಬಿಜೆಪಿ ಗೆಲುವಿಗೆ ಕಾರಣರಾಗಿದ್ದರು. ಇದೀಗ ಅದೇ ತಂತ್ರವನ್ನು ಮತ್ತೆ ಹೆಣೆಯಲು ಅವರು ಚುನಾವಣೆ ನಡೆಯಲಿರುವ ರಾಜ್ಯಕ್ಕೆ ತೆರಳುತ್ತಿದ್ದಾರೆ.