ಬೆಳಗಾವಿ:
ಬೆಳಗಾಂ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿನ ಕಾರ್ಯಕ್ರಮಕ್ಕೆ ಶುಕ್ರವಾರ ರೈತ ಮುಖಂಡರು, ಕಾರ್ಖಾನೆಯ ಆಡಳಿತ ಮಂಡಳಿ, ಕಾರ್ಮಿಕರು, ಸಿಬ್ಬಂದಿ ಹಾಗೂ ಅಧಿಕಾರಿ ವರ್ಗದವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಎಲ್.ಆರ್.ಕಾರಗಿ ಅವರು ಮಾತನಾಡಿ, ಪ್ರಸಕ್ತ 2023-24 ರ ಹಂಗಾಮಿನಲ್ಲಿ 12 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದೇವೆ. ಕಬ್ಬು ಪೂರೈಸಿದ ರೈತರಿಗೆ ತ್ವರಿತ ಗತಿಯಲ್ಲಿ ಕಬ್ಬಿನ ಬಿಲ್ಲನ್ನು ಸಂದಾಯ ಮಾಡಲಾಗುವುದು. ರೈತರು ಕಾರ್ಖಾನೆಗೆ ಗುಣಮಟ್ಟದ ಕಬ್ಬನ್ನು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಜಿಲ್ಲೆಯ ಪ್ರಗತಿಪರ ರೈತರಾದ ಮಂಜುನಾಥ ಪಾಟೀಲ, ರಾಜು ದರಗಶೆಟ್ಟಿ, ಕಾಶಿನಾಥ ಇನಾಮದಾರ, ಹಬಿಬ್ ಶಿಲ್ಲೇದಾರ, ರಿಯಾಜ ಬಾಳೆಕುಂದ್ರಿ, ಚಂದ್ರು ಕುಂದರಗಿ, ಸನ್ನಸಂಗಪ್ಪ ಕಬ್ಬೂರ, ಮಲ್ಲಿಕಾರ್ಜುನ ಮಮದಾಪೂರ, ಅನ್ನಪ್ಪಗೌಡ ಬಾರಿಗಿಡದ, ಬಾಗಣ್ಣಾ ನರೋಟೆ, ಅಡಿವೆಪ್ಪಾ ನಾಯಿಕ, ನಿಲಕಂಠ ಮದವಾಲ, ಭೀಮಪ್ಪ ಮಳಗಲಿ, ಶಿವಪ್ಪ ಈರನಟ್ಟಿ, ಸುರೇಶ ಗವನ್ನವರ, ಸಿದ್ದಣ್ಣ ಗಡಕರಿ ಹಾಗೂ ಇತರ ಪ್ರಗತಿಪರ ರೈತರು ಮತ್ತು ಕಾರ್ಖಾನೆಯ ಹಿರಿಯ ಉಪಾಧ್ಯಕ್ಷರಾದ ಎಲ್. ಆರ್. ಕಾರಗಿ, ಪಿ.ಡಿ. ಹಿರೇಮಠ, ಉಪಾಧ್ಯಕ್ಷ ಎ. ಎಸ್. ರಾಣಾ ಮತ್ತು ಕಾರ್ಖಾನೆಯ ಕಾರ್ಮಿಕರು, ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.