ದೆಹಲಿ: ಕಡಲ ಗಡಿ ರಕ್ಷಣೆಯಲ್ಲಿ ಬಹುವಿಧದ ಕಾರ್ಯ ನಿರ್ವಹಿಸಬಲ್ಲ ಯುದ್ಧವಿಮಾನ ಸೇರಿದಂತೆ ಸೇನೆಗೆ ಅಗತ್ಯವಿರುವ ₹ 84,560 ಕೋಟಿ ಮೊತ್ತದ ಹಾರ್ಡ್ವೇರ್ ಖರೀದಿಗೆ ರಕ್ಷಣಾ ಸಚಿವಾಲಯ ಶುಕ್ರವಾರ ಒಪ್ಪಿಗೆ ನೀಡಿದೆ. ಸಶಸ್ತ್ರ ಪಡೆಗಳ ದಾಳಿ ಸಾಮರ್ಥ್ಯವನ್ನು ಹೆಚ್ಚಿಸುವ ಈ ಖರೀದಿ ಪ್ರಸ್ತಾವಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಅನುಮೋದನೆ ನೀಡಿತು ಎಂದು ಸಚಿವಾಲಯ ತಿಳಿಸಿದೆ.
ಸೇನೆಯನ್ನು ಬಲಪಡಿಸಲು ಈ ₹84,560 ಕೋಟಿ ರಕ್ಷಣಾ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿದೆ. ಇದರ ಅಡಿಯಲ್ಲಿ, ಟ್ಯಾಂಕ್ ವಿರೋಧಿ ಗಣಿಗಳು, ವಾಯು ರಕ್ಷಣಾ ಯುದ್ಧತಂತ್ರದ ನಿಯಂತ್ರಣ ರಾಡಾರ್, ಫೈಟ್ ರಿಪ್ಯೂಲರ್ ವಿಮಾನಗಳು, ಹೆವಿವೇಯ್ಡ್ ಟಾರ್ಪಿಡೊಗಳು, ಸಮುದ್ರ ಕಣ್ಣಾವಲು ವಿಮಾನಗಳನ್ನು ಖರೀದಿಸಲಾಗುತ್ತದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ‘ಸೇನೆ, ನೌಕಾಪಡೆ, ವಾಯುಪಡೆ, ಕೋಸ್ಟ್ ಗಾರ್ಡ್ನ ಸಾಮರ್ಥ್ಯವನ್ನು ಹೆಚ್ಚಿಸಲು ಈ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’ ಎಂದಿದ್ದಾರೆ.