ಬೆಳಗಾವಿ :
ಕನ್ನಡ ನಾಡು-ನುಡಿ ಬಗ್ಗೆ ಪ್ರತಿಯೊಬ್ಬರಲ್ಲೂ ಅಭಿಮಾನ ಮೂಡಬೇಕು ಎಂದು ಪ್ರಾಚಾರ್ಯ ರವೀಂದ್ರ ಪಾಟೀಲ ಹೇಳಿದರು.
ನಗರದ ಜಿ.ಎ. ಹೈಸ್ಕೂಲ್ ನಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
ಕನ್ನಡನಾಡು ಬಹುದೊಡ್ಡ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಮಿನಿ ಭಾರತ ಎಂದೇ ಕನ್ನಡನಾಡು ಜನಪ್ರಿಯತೆ ಗಳಿಸಿದೆ. ಶಾಂತಿ- ಸಹನೆ ಮುಂತಾದ ಶ್ರೇಷ್ಠ ಗುಣಗಳು ಕನ್ನಡಿಗರಲ್ಲಿ ಜನ್ಮಜಾತವಾಗಿ ಬಂದಿವೆ. ಕನ್ನಡಿಗರು ತಮ್ಮ ಭವ್ಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ತಮ್ಮ ಪಾತ್ರ ನಿಭಾಯಿಸಬೇಕಾಗಿದೆ. ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ತಮ್ಮ ಮಾತೃ ಭಾಷೆಯಾಗಿರುವ ಕನ್ನಡವನ್ನು ಎಂದಿಗೂ ಮರೆಯಬಾರದು. ನಾಡಿನ ಬಗ್ಗೆ ಅಪರಿಮಿತ ಪ್ರೀತಿ ಪ್ರೇಮ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.
ಉಪ ಪ್ರಾಚಾರ್ಯ ಸಿದ್ಧರಾಮ ಗದಗ, ಸಾಂಸ್ಕೃತಿಕ ಒಕ್ಕೂಟದ ಅಧ್ಯಕ್ಷೆ
ಅಲ್ಕಾ ಪಾಟೀಲ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ಉಪನ್ಯಾಸಕ ಬಾನಕರೆ ಕನ್ನಡನಾಡಿನ ಕುರಿತು ಮಾತನಾಡಿದರು. ಛದ್ಮವೇಷ ಸ್ಪರ್ಧೆ,
ದೇಶಭಕ್ತಿಗೀತೆ, ನಾಡಗೀತೆ, ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.
ಜನಸಾಹಿತ್ಯ ಪೀಠದಿಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಛದ್ಮವೇಷ ಸೇರಿದಂತೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.