ಬೆಳಗಾವಿ: ಸುಮಾರು 107 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಬೆಳಗಾವಿಯ ಪ್ರತಿಷ್ಠಿತ ಕೆಎಲ್ ಇ ಸಂಸ್ಥೆಯ ಗಿಲಗಿಂಚಿ ಅರಟಾಳ ಪದವಿ ಪೂರ್ವ ಮತ್ತು ಪ್ರೌಢಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಾಚಾರ್ಯ ರವೀಂದ್ರ ಪಾಟೀಲ ಮತ್ತು ಉಪ ಪ್ರಾಚಾರ್ಯ ಚನ್ನಬಸಪ್ಪ ದೇವಋಷಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ರವೀಂದ್ರ ಪಾಟೀಲ ಅವರು, ಜಗತ್ತಿನ ಇತಿಹಾಸದಲ್ಲೇ ಭಾರತದ ಸ್ವಾತಂತ್ರ್ಯ ಹೋರಾಟ ಅದ್ವಿತೀಯವಾಗಿದೆ. ಭಾರತೀಯರು ಬ್ರಿಟಿಷರನ್ನು ಈ ದೇಶದಿಂದ ಓಡಿಸಲು ಮಾಡಿರುವ ಹೋರಾಟ ಎಲ್ಲಾ ಕಾಲಕ್ಕೂ ಸದಾ ನೆನಪಿನಲ್ಲಿ ಉಳಿಯುವಂತದ್ದು. ನಮ್ಮ ಹಿರಿಯರು ನೀಡಿರುವ ಈ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಸದಾ ಉಳಿಸಿಕೊಂಡು ದೇಶದ ಪ್ರಗತಿಗೆ ಸದಾ ಶ್ರಮಿಸಲು ತಾವೆಲ್ಲರೂ ಕಂಕಣಬದ್ಧರಾಗಬೇಕು ಎಂದು ಅವರು ಕರೆ ನೀಡಿದರು.
ಕೆಎಲ್ಇ ಸಂಸ್ಥೆಯ ಸಂಸ್ಥೆಯ ಆಜೀವ ಸದಸ್ಯ ಮಹಾದೇವ ಬಳಿಗಾರ ಅವರು ರಾಷ್ಟ್ರ ನಾಯಕರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು.
ವಿದ್ಯಾರ್ಥಿಗಳಾದ ಸ್ನೇಹಲ್ ಪಾಟೀಲ, ಸಮೀಕ್ಷಾ ಕಾಲಕುಂದ್ರೀಕರ, ಶೀತಲ್ ಕುರುಬರ, ಗಂಗೋತ್ರಿ ಪಾಟೀಲ, ಲಕ್ಷ್ಮೀ ಗೋನಿ, ಹಿತೇಶ ಸಹಾನಿ, ಗೌರಿ ಕವಲದ, ಶೀಫಾ ಕೊಳಚಿ ಮತ್ತು ಶಿಕ್ಷಕಿಯರ ಪರವಾಗಿ ಕೆ.ಆರ್. ಪಟ್ಟಣ ಅವರು ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಮಾತನಾಡಿದರು.
ಯಶೋಧ ಪಾಟೀಲ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಕ್ಕುಬಾಯಿ ಗೌಡ್ನಳ್ಳಿ ಸ್ವಾಗತ ಗೀತೆ ಹಾಡಿದರು. ಉಪನ್ಯಾಸಕ ಗಂಗಾಪುರ ಸ್ವಾಗತಿಸಿದರು. ಎಸ್. ಎಫ್. ದೇವಲಾಪುರ ನಿರೂಪಿಸಿದರು. ಉಪನ್ಯಾಸಕಿ ಶ್ರೀದೇವಿ ಗುಮ್ಮಗೋಳ ವಂದಿಸಿದರು.
ಶಿಕ್ಷಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.