ಬೆಳಗಾವಿ: ಕೋಮುಗಲಭೆಗೆ ಕಾರಣವಾಗುವ ಪ್ರಚೋದನಕಾರಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಸೇರಿ ಇಬ್ಬರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಇನ್ಸ್ಟಾಗ್ರಾಂನಲ್ಲಿ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಅವರ ಚಿತ್ರಗಳನ್ನು ಬಳಸಿ ಪ್ರಚೋದನಕಾರಿ ಸಂದೇಶ ಹರಿಬಿಟ್ಟಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತ, ಆಜಾದ್ ನಗರದ ನಿವಾಸಿ ಮುಜಮಿಲ್ ಅತ್ತಾರ (32) ಮತ್ತು ಛತ್ರಪತಿ ಶಿವಾಜಿ ಮಹಾರಾಜರು ಮತ್ತು
ಮತ್ತು ಔರಂಗಜೇಬ್ ಚಿತ್ರ ಬಳಸಿ ಆಕ್ಷೇಪಾರ್ಹ ಬರಹ ಬರೆದು ಹಂಚಿಕೊಂಡಿದ್ದ, ಬಡಕಲಗಲ್ಲಿ ನಿವಾಸಿ ಜಾಧವ (19) ಆರೋಪಿಗಳು.
ಇಬ್ಬರ ವಿರುದ್ಧ ಮಾರ್ಕೆಟ್ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.