ಹುಬ್ಬಳ್ಳಿ : ಕಾರ್ ಮತ್ತು ಟ್ರಕ್ ನಡುವೆ ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಕ್ರಾಸ್ ಬಳಿ ಮಂಗಳವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲಿಯೇ ಐವರ ದುರ್ಮರಣ ಹೊಂದಿದ್ದಾರೆ.
ಮೃತರೆಲ್ಲರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು. ಅವರೆಲ್ಲರೂ ಶಿವಮೊಗ್ಗ ಜಿಲ್ಲೆಯ ಸಾಗರದವರು. ಶ್ವೇತ (29),ಅಂಜಲಿ(26),ಸಂದೀಪ್ (26)
ವಿಠಲ್ (55) ಶಶಿಕಲಾ (40) ಮೃತರು ಎಂದು ಧಾರವಾಡ ಜಿಲ್ಲೆ ಪೊಲೀಸ್ ವರಿಷ್ಟಧಿಕಾರಿ ಗೋಪಾಲ ಬ್ಯಾಕೋಡ್ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯನ್ವಯ ಅಪಘಾತಕ್ಕೆ ಟ್ರಕ್ ಕಾರಣ ಅದು ಹೆಚ್ಚು ವೇಗವಾಗಿ ಚಲಿಸುತ್ತಿತ್ತು. ಅಪಘಾತದ ಬಳಿಕ ಟ್ರಕ್ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪಲಾಯನ ಮಾಡಿದ್ದಾನೆ ಎಂದು ಎಸ್ ಪಿ ತಿಳಿಸಿದರು.
ಹೋಟೆಲ್ ಉದ್ಯಮ್ಯದಲ್ಲಿ ತೊಡಗಿದ್ದ ಮೃತರು ವ್ಯಾಪಾರದ ನಿಮಿತ್ಯ ಹುಬ್ಬಳ್ಳಿ ಮೂಲಕ ಬಾಗಲಕೋಟಗೆ ತೆರಳಿದ್ದರು ಎಂದು ಎಸ್ ಪಿ ತಿಳಿಸಿದರು.