ಹೊನಗಾ ಹೈವೇ ಮೇಲೆ ಕಾರು ಅಪಘಾತ; ಬೆಳಗಾವಿಯ ಯುವಕರಿಗೆ ಗಂಭೀರ ಗಾಯ..!
ಹೊನಗಾ ಹೈವೇ ಮೇಲೆ ಕಾರು ಅಪಘಾತ; ಬೆಳಗಾವಿಯ ಯುವಕರಿಗೆ ಗಂಭೀರ ಗಾಯ..!
ಅಪಘಾತ ತಪ್ಪಿಸಲು ಹೋದ ಸರ್ಕಾರಿ ಬಸ್, ಖೋಕಾಗಳು ಜಖಂ; ಲಕ್ಷಾಂತರ ರೂ ಹಾನಿ.
ಬೆಳಗಾವಿ : ಹೂಂಡಾಯಿ ಕಾರಿನಲ್ಲಿ ಧಾಬಾದಲ್ಲಿ ಊಟ ಮುಗಿಸಿ ಹತ್ತರಗಿ ಕಡೆಯಿಂದ ಬೆಳಗಾವಿ ಕಡೆ ಪ್ರಯಾಣಿಸುತ್ತಿದ್ದ ಬೆಳಗಾವಿಯ ಆರು ಜನ ಯುವಕರ ಕಾರೊಂದು ಹೊನಗಾ ಹೈವೇ ಮೇಲೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ದುರ್ಘಟನೆ ನಿನ್ನ ಮಧ್ಯರಾತ್ರಿ ನಡೆದಿದೆ.
ನಿನ್ನೆ ಮಧ್ಯರಾತ್ರಿ ಹನ್ನೇರಡು ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಹೂಂಡಾಯಿ ಕಾರಿನಲ್ಲಿದ್ದ 7 ಜನ ಯವಕರ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡವರಲ್ಲಿ 6 ಜನರು ಮುಸ್ಲಿಂ ಯುವಕರಾಗಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶವರಾಗಿದ್ದಾರೆ. ಇನ್ನೂ ಕೊಪ್ಪಳ ಮೂಲದ ಚಾಲಕನೂ ಗಾಯಗೊಂಡಿದ್ದಾನೆ
೧.ಮಹ್ಮದರಿಯಾಜ್
೨.ಮಹ್ಮದ ನಾಶಿರುದ್ದಿನ
೩.ಲುರಮಾನಖಾನ ಮಡಿವಾಳೆ
೪.ರೇಹಾನ ಮಂಜೂರ ಮಕಾಂದಾರ
೫.ಮಹಮ್ಮದ್ ಉಮರ್ ಮಡಿವಾಳೆ
೬.ನಿಯಾಜ ಸಲಾಮ ದೇಸಾಯಿ
೭.ಡ್ರೈವರ್ ವಿರುಪಾಕ್ಷಪ್ಪ ಚಿತ್ತಾಪೂರ ಎಂಬುವ 7 ಜನ ಗಾಯಗೊಂಡವರು.
ನಿನ್ನೇ ರಾತ್ರಿ 6 ಜನ ಯುವಕರು ಸೆರಿಕೊಂಡು ಕಾರಿನಲ್ಲಿ ದಾಭಾಗೆ ಹೋಗಿ ಊಟ ಮುಗಿಸಿ ಹತ್ತರಗಿ ಕಡೆಯಿಂದ ಮರಳಿ ಬೆಳಗಾವಿ ಕಡೆ ಪ್ರಯಾಣಿಸುತ್ತಿದ್ದಾಗ ಅತಿಯಾದ ವೇಗದಲ್ಲಿ ಚಲಾಯಿಸುವ ವೇಳೆ ನಿಯಂತ್ರಣ ತಪ್ಪಿ ಡಿವೈಡರ ಮೇಲೆ ಏರಿದ ಕಾರು ಪೂರ್ವ ದಿಕ್ಕಿನಿಂದ ಪಶ್ಚಿಮ ದಿಕ್ಕಿನ ರಸ್ತೆಮೇಲೆ ಬಂದು ಬಿದ್ದಿದೆ. ಇಷ್ಟರಲ್ಲೆ ಪುಣೆಗೆ ತೆರಳುತ್ತಿದ್ದ KSRTC ಬಸ್ ಆ ಅಪಘಾತದಿಂದ ತಪ್ಪಿಸಿಕೊಳ್ಳಲು ಹೋಗಿ ಸರ್ವಿಸ್ ರಸ್ತೆ ದಾಟಿ ಪಕ್ಕದಲ್ಲಿದ್ದ ವಡಪಾವ ಅಂಗಡಿ ಹಾಗೂ ಪಾನಶಾಪ್ ಗೆ ಗುದ್ದಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ.
ಘಟನೆ ಸಂಭವಿಸುತ್ತಿದ್ದಂತೆ ಕಾಕತಿ ಪಿಐ ಸುರೇಶ ಶಿಂಗಿ, ಪಿಎಸ್ಐ ಮಂಜುನಾಥ ಹುಲಕುಂದ ಸಿಬ್ಬಂದಿಗಳು ಧಾವಿಸಿ, ಗಾಯಗೊಂಡವರನ್ನು ಆಸ್ಪತ್ರೆಗ ದಾಖಲಿಸಿ, ಅಪಘಾತದಿಂದಾಗಿ ಅಸ್ತವ್ಯಸ್ತವಾಗಿದ್ದ ಹೆದ್ದಾರಿ ಸಂಚಾರವನ್ನು ತಕ್ಷಣ ಸುಗಮಗೊಳಿಸಿದ್ದಾರೆ.
ಈ ಕುರಿತು ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.