ನವದೆಹಲಿ: ಸ್ಟೇಷನರಿ ಬ್ರಾಂಡ್ ಕ್ಯಾಮ್ಲನ್ ಸಂಸ್ಥಾಪಕ ಸುಭಾಷ್ ದಾಂಡೇಕರ್ (86) ಅವರು ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜನಪ್ರಿಯ ಕಲಾಕೃತಿ ಬ್ರಾಂಡ್ ಅನ್ನು ಜಪಾನ್ನ ಕೊಕುಯೊಗೆ ಮಾರಾಟ ಮಾಡಿದ ಬಳಿಕ ದಾಂಡೇಕರ್ ಕೊಕುಯೊ ಕ್ಯಾಮ್ಲನ್ನ ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಸುಭಾಷ್ ದಾಂಡೇಕರ್ ಅವರ ಪತ್ನಿ ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ಪುತ್ರ ಹಾಗೂ ಪುತ್ರಿಯನ್ನು ದಾಂಡೇಕರ್ ಅಗಲಿದ್ದಾರೆ.
ದಾಂಡೇಕರ್ ಅವರ ಅಂತ್ಯಕ್ರಿಯೆಯನ್ನು ಮುಂಬೈಯಲ್ಲಿ ನಡೆಸಲಾಗಿದ್ದು, ಗುರುವಾರ ಸಂತಾಪ ಸಭೆ ಹಮ್ಮಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
90ರ ದಶಕದಲ್ಲಿ ಕ್ಯಾಪ್ಲಿನ್ ಪೆನ್ಸಿಲ್, ಪೆನ್, ಕಂಪಾಸ್ ಸೇರಿದಂತೆ ಜಾಮಿಟ್ರಿ ಬಾಕ್ಸ್ ಹೆಚ್ಚಿನ ಜನಪ್ರಿಯತೆ ಗಳಿಸಿತ್ತು. ಎರಡು-ಮೂರು ದಶಕಗಳಿಂದ ಕ್ಯಾಮ್ಲನ್ ಕಂಪಾಸ್ ಮತ್ತು ಪೆನ್, ಪೆನ್ಸಿಲ್ ಬ್ರಾಂಡ್ ಶಾಲಾ ಮಕ್ಕಳಲ್ಲಿ ಜನಪ್ರಿಯ ವಸ್ತುವಾಗಿ ಉಳಿದಿತ್ತು.