ವಿಶ್ವಪೋಟೊಗ್ರಾಫಿ ದಿನದ ವಿಶೇಷಾರ್ಥವಾಗಿ ನಾಡಿನ ಹಿರಿಯ ಛಾಯಾಗ್ರಾಹಕ ಪಿ. ಕೆ. ಬಡಿಗೇರ ಅವರ ಕ್ಯಾಮೆರಾ ಒಡನಾಟದ ಪರಿಚಯಾತ್ಮಕ ಲೇಖನ.
ಬೆಳಗಾವಿ: ಮಳೆ, ಹೊಲದಲ್ಲಿ ನಾಟಿ ಮಾಡುವುದು, ಉತ್ತುವುದು, ಬಿತ್ತುವುದು, ಹರಗುವುದು ರೈತನ ನಲಿವು, ಅವನ ಕಷ್ಟದ ಸಂಧರ್ಭಗಳನ್ನು ಎತ್ತು ಎಮ್ಮೆಗಳೊಂದಿಗೆ ಆತನ ಪರಸ್ಪರ ಸಹಜೀವನದ ನಿತ್ಯ ಚಟುವಟಿಕೆಗಳನ್ನು ಬಿಂಬಿಸುತ್ತ ಇಂಬು ನೀಡುವ ಕೃಷಿಪ್ರೇಮಿ ಛಾಯಾಗ್ರಾಹಕನಾಗಿ.
ವಿಶ್ವ ಶ್ರೇಷ್ಠ ಹಾಗೂ ರಾಷ್ಟ್ರಪತಿ, ಪ್ರಧಾನಿ ಸೇರಿದಂತರ ರಾಷ್ಟ್ರೀಯ ನಾಯಕರು ಜಿಲ್ಲೆಗೆ ಭೇಟಿ ನೀಡಿದಾಗ ಸೆರೆಹಿಡಿದ ವಿಭಿನ್ನ ಭಂಗಿಗಳು, ವಿಮಾನ ಹೆಲಿಕಾಪ್ಟರ್ ಮೂಲಕ ಸ್ಥಳ ವೀಕ್ಷಣೆ ಸಂಧರ್ಭದಲ್ಲಿ ಜನನಾಯಕರ ಜೊತೆಗೆ ಕುಳಿತು ಕ್ಲಿಕ್ಕಿಸಿದ ಛಾಯಾಚಿತ್ರಗಳು, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆವಷ್ಟು ಆಕರ್ಷಕ ಛಾಯಾಗ್ರಹಣ ಕಲೆಯನ್ನು ಮೈಗೂಡಿಸಿಕೊಂಡಿವೆ.
ಇಂದಿಗೆ 25 ವರ್ಷಗಳ ಸಾರ್ಥಕ ಸಾರ್ವಜನಿಕ ಫೋಟೋಗ್ರಾಫಿ ಸೇವೆ ನೀಡಿರುವ ಪಿ.ಕೆ. ಬಡಿಗೇರ ಅವರ ನೆನಪಾವಳಿ ಫೋಟೋಗ್ರಾಫಿ ದಿನದ ವಿಶೇಷ ಎನ್ನಿಸಿದೆ.
ಪ್ರಶಸ್ತಿಗಳು: ನಿಷ್ಠೆ ವೃತ್ತಿ ಕೌಶಲ್ಯಕ್ಕೆ ಮೆಚ್ಚಿ ಅನೇಕ ಪ್ರಶಸ್ತಿಗಳು ಒಲಿದುಬಂದಿವೆ.
ಧಾರವಾಡ ಆರ್. ಕೆ. ಛಾಯಾ ಫೌಂಡೇಶನ್ ಮತ್ತು ಸೃಷ್ಟಿ ಸಂಘಟನೆಯಿಂದ ಕೊಡಮಾಡುವ ‘ ಬಿಂಬ-ಭಾವ’ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಬಾಬುರಾವ್ ಟಾಕೂರ್ ಅತ್ಯುತ್ತಮ ಛಾಯಾಗ್ರಾಹಕ ‘ಪ್ರಶಸ್ತಿ,ನಾಡಿನ ಪ್ರತಿಷ್ಠಿತ ಮಠಗಳು, ಧಾರ್ಮಿಕ ಕೇಂದ್ರಗಳು ಹಾಗೂ ಸಮಾಜ ಸೇವೆ ಕಲಾಸೇವೆಯಲ್ಲಿ ತೊಡಗಿರುವ ವಿವಿಧ ಅರೆ ಸರ್ಕಾರಿ ಸೇವಾ ಸಂಘ ಸಂಸ್ಥೆಗಳು ಇವರ ಉತ್ತಮ ಛಾಯಾಗ್ರಹಣ ಸೇವೆಯನ್ನು ಮೆಚ್ಚಿ ಸನ್ಮಾನ, ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಿವೆ.ಅಷ್ಟೆ ಅಲ್ಲದೆ ಜಿಲ್ಲೆಯಲ್ಲಿನ ಸರ್ಕಾರಿ ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ಸೆರೆಹಿಡಿದು ಸರಕಾರಿ ವಲಯದಿಂದಲೂ ಪ್ರಶಂಸೆ ಗಿಟ್ಟಿಸಿದ್ದಾರೆ.
ಪಿ. ಕೆ. ಬಡಿಗೇರ ಅವರು ತಾವು ಸೆರೆ ಹಿಡಿದ ಉತ್ಕೃಷ್ಟ ಛಾಯಾಚಿತ್ರಗಳನ್ನು ಒಂದೆಡೆ ಸೇರಿಸಿ ಬೆಳಗಾವಿ, ಧಾರವಾಡ , ಬೆಂಗಳೂರಿನಲ್ಲಿ ಪೋಟೋ ಎಕ್ಸಿಬಿಷನ್ ಗಳನ್ನು ಏರ್ಪಡಿಸಿ ನೋಡುಗರ ಕಣ್ಣುಗಳಿಗೆ ರಸದೌತನ ಉಣಬಡಿಸಿದ್ದಾರೆ.ಬೆಳಗಾವಿಯಲ್ಲಿ ಪ್ರವಾಹ ಬಂದಾಗ ನೆರೆ ಸಂತ್ರಸ್ತರ ದಾರುಣ ಸ್ಥಿತಿಯನ್ನು, ನಿರ್ಗತಿಕರಾದವರ ಪರಿಹಾರ ಕಾರ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದ ಚಿತ್ರಗಳ ಪ್ರದರ್ಶನ ಮನೋಜ್ಞವಾಗಿದ್ದು ಮುಖ್ಯಮಂತ್ರಿಯವರ ಗೌರವಕ್ಕೆ ಪಾತ್ರವಾಗಿದ್ದು ಹಾಗೂ ಜನಮೆಚ್ಚುಗೆ ಗಳಿಸಿದ್ದು ಇವರ ಛಾಯಾಗ್ರಹಣ ವೃತ್ತಿಗೆ ಸಂದ ಗೌರವವಾಗಿದೆ.
ಒಂದು ದೃಶ್ಯವನ್ನು ಸಾಮಾನ್ಯವಾಗಿ ನೋಡದೆ ತನ್ನ ಒಳಗಣ್ಣಿನಿಂದ ನೋಡಿ ವಿವಿಧ ಆಯಾಮಗಳಲ್ಲಿ ಅಳೆದು ತೂಗಿ, ತನ್ನೊಳಗೆ ತಾನೇ ಪರಾಮರ್ಶಿಸಿಕೊಂಡು, ನೋಡುಗರು ಹುಬ್ಬೇರಿಸುವಂತೆ ಮನತಟ್ಟುವಂತೆ ಸೆರೆಹಿಡಿದು ಛಾಯಾಚಿತ್ರಗಳನ್ನಾಗಿ ಪ್ರಸ್ತುತಪಡಿಸಲು ಕಲಾವಂತಿಕೆ ಇರಬೇಕು. ವೃತ್ತಿ ನೈಪುಣ್ಯತೆ ಇರಬೇಕು. ಸೂಕ್ಷ್ಮ ದೃಷ್ಟಿಕೋನದ ಜೊತೆಗೆ ಕ್ರಿಯಾಶೀಲ ಮನಸ್ಸಿರಬೇಕು ಹಾಗೂ ತಾಳ್ಮೆಯಿಂದ ಸೆರೆಹಿಡಿವ ಧೀಃಶಕ್ತಿ ಇರಬೇಕು ಇಷ್ಟೆಲ್ಲ ಗುಣಗಳನ್ನು ಮೈಗೂಡಿಸಿಕೊಂಡು ಮನಸ್ಸಿಗೆ ಆಹ್ಲಾದವನ್ನುಂಟುಮಾಡುವ ಛಾಯಾಚಿತ್ರಗಳನ್ನು ಸೆರೆಹಿಡಿಯುವಲ್ಲಿ ನಿಷ್ಣಾತ ಪಿ. ಕೆ. ಬಡಿಗೇರ. ತಮ್ಮ ಕ್ರಿಯಾಶೀಲ ಛಾಯಾಗ್ರಹಣ ಸೇವೆಯನ್ನೇ ವೃತ್ತಿ ಹಾಗೂ ಪ್ರವೃತ್ತಿಯನ್ನಾಗಿಸಿಕೊಂಡು ಇದನ್ನೇ ತಮ್ಮ ಉಸಿರಾಗಿಸಿಕೊಂಡಿದ್ದಾರೆ.
ಇವರಿಗೆ ಒಲಿದ ಛಾಯಾಗ್ರಹಣ ಆಸಕ್ತಿಯ ಕಲೆಯನ್ನು ಇವರೇ ಸ್ವತಃ ಕಂಡುಕೊಂಡು ಬೆಳೆಸಿಕೊಂಡು ಹೋಗುತ್ತಿದ್ದಾರೆ. ಇವರ ಕುಟುಂಬದಲ್ಲಿ ಇವರೇ ಮೊದಲ ಛಾಯಾಗ್ರಾಹಕ ಸೇವೆಯನ್ನು ಆರಂಭಿಸಿದವರು. ಇವರು ಮೂಲತಃ ಸವದತ್ತಿ ತಾಲೂಕಿನ ಮದ್ಲೂರ ಗ್ರಾಮದ ಬಡಿಗತನ ಕುಟುಂಬದಿಂದ ಬಂದಿದ್ದರೂ ತಂದೆಯವರಿಂದ ಕಲಿತ ಬಡಿಗತನ ಉದ್ಯೋಗವನ್ನೆ ಪೂರ್ಣಪ್ರಮಾಣದಲ್ಲಿ ನೆಚ್ಚಿಕೊಳ್ಳದೇ ಅದರ ಜೊತೆಗೆ ಸವದತ್ತಿಯ ತೋಂಟದಾರ್ಯ ಸಿದ್ಧಲಿಂಗೇಶ್ವರ ಮಹಾ ವಿದ್ಯಾಲಯದಲ್ಲಿ ಚಿತ್ರಕಲಾ ಶಿಕ್ಷಣವನ್ನು ಪಡೆದು ಬೆಳಗಾವಿಯಲ್ಲಿ ನೆಲೆ ನಿಂತು ಅಂಗಡಿ, ಕಛೇರಿಗಳ ನಾಮಫಲಕ ಬರೆಯುವುದು ಪೇಂಟರ್ ಕೆಲಸ ಮಾಡುವುದು, ಜೊತೆ ಜೊತೆಗೆನೇ ಶಿಕ್ಷಣ ಇಲಾಖೆಯಲ್ಲಿನ ಶಿಕ್ಷಕರಿಗೆ ,ಡಿಇಡಿ, ಬಿಎಡ್ ಪ್ರಶಿಕ್ಷಣಾರ್ಥಿಗಳಿಗೆ ಪಾಠ ಮಾಡಲು ಪ್ರಾತ್ಯಕ್ಷಿಕೆಯಾಗಿ ಬಳಸುವ ಚಿತ್ರಪಟಗಳನ್ನು ಬರೆದು ಕೊಡುವ ಅರೆಕಾಲಿಕ ವೃತ್ತಿಯನ್ನು ಮಾಡಿದರು.
“ಶ್ರದ್ಧೆ ,ನಿಷ್ಟೆಯಿಂದ ಕಲಿತ ಶಿಕ್ಷಣ ಎಂದಿಗೂ ನಮ್ಮ ಕೈಯನ್ನು ಬಿಡುವುದಿಲ್ಲ”ವೆಂಬಂತೆ ಅವರು ಕಲಿತ ಚಿತ್ರ ಕಲಾಶಿಕ್ಷಣ ಅವರ ಕೈಯನ್ನು ಬಿಡಲಿಲ್ಲ ಅವರ ಕಲಾರಾಧನೆಯ ತಪಸ್ಸಿಗೆ ಒಲಿದದ್ದು ‘ನಾಡೋಜ ಪತ್ರಿಕೆಯಲ್ಲಿ’ ಕಾರ್ಟೂನಿಷ್ಟ ಕೆಲಸ. ವ್ಯಂಗ ಚಿತ್ರಕಾರರಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಅವರು ತದನಂತರದಲ್ಲಿ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯ ಮೂಲಕ ಪತ್ರಿಕಾ ಛಾಯಾಗ್ರಹಣ ಸೇವೆಗೆ ತಮ್ಮನ್ನು ತಾವು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಸುಮಾರು ಎರಡು ದಶಕಗಳ ಕಾಲಾವಧಿಯಲ್ಲಿ ದಿ ಹಿಂದೂ, ಉದಯವಾಣಿ ದಿನಪತ್ರಿಕೆಗಳು ಸೇರಿದಂತೆ ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ ಪತ್ರಿಕೆಗಳಲ್ಲಿ ತಮ್ಮ ಅಮೋಘ ಸೇವೆಯನ್ನು ಧಾರೆಯೆರೆದಿದ್ದಾರೆ.
ಪ್ರಸ್ತುತ ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲಿ ಛಾಯಾಗ್ರಾಹಕ ರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಒಬ್ಬ ಉತ್ತಮ ಛಾಯಾಚಿತ್ರಕಾರನ ಒಳನೋಟ ತೀಕ್ಷ್ಣವಾಗಿದ್ದು ಆ ಸಂಧರ್ಭ,ಪ್ರಸಂಗ ಹಾಗೂ ಘಟನೆಗಳನ್ನು ಒಂದೇ ಛಾಯಾಚಿತ್ರದಲ್ಲಿ ಸೆರೆಹಿಡಿದು ನೋಡುಗರಿಗೆ ಒಟ್ಟಾರೆ ಆ ಕ್ಷಣದ ಸಮಗ್ರ ಸನ್ನಿವೇಶಗಳನ್ನು ಬಿಂಬಿಸುವಂತ ಪ್ರಜ್ಞೆಯನ್ನು ಛಾಯಾಗ್ರಾಹಕ ಹೊಂದಿರಬೇಕು.
ಇಂತಹ ತೀಕ್ಷಗುಣವನ್ನು ಹೊಂದಿದ ಬಡಿಗೇರ ಅವರು ತಮ್ಮ ಪತ್ರಿಕಾ ಛಾಯಾಗ್ರಹಣ ವೃತ್ತಿಯೊಂದಿಗೆ, ಜನಮನ ತಣಿಸುವಂತಹ ಸುಂದರ ಛಾಯಾಚಿತ್ರಗಳನ್ನು ಸರೆಹಿಡಿದು ಹವ್ಯಾಸಿ ಛಾಯಾಗ್ರಾಹಕರಾಗಿಯೂ ತಮ್ಮ ಕಲೆಯಲ್ಲಿ ಸಿದ್ದಹಸ್ತರಾಗಿದ್ದಾರೆ. ಸೂರ್ಯೋದಯ, ಸೂರ್ಯಸ್ತ, ಬೆಟ್ಟ ಗುಡ್ಡಗಳ ಸೃಷ್ಟಿಯ ಸುಂದರತೆ ಹಾಗೂ ವಿವಿಧ ಜಾತಿಯ ಪ್ರಾಣಿ ದೇಶವಿದೇಶಗಳಿಂದ ಆಗಮಿಸಿದ ಪಕ್ಷಿ ಸಂಕುಲಗಳ ಅಪರೂಪದ ಚಲನವಲನಗಳನ್ನು ಕ್ಲಿಕ್ಕಿಸಿ ವನ್ಯಜೀವಿ ಛಾಯಾಗ್ರಾಹಕರಾದರೆ ,ಅತೀವೃಷ್ಟಿ ಪ್ರವಾಹದಂತ ಪ್ರಕೃತಿ ವಿಕೋಪ ಪೀಡಿತ ಸ್ಥಳಗಳಿಗೆ ತೆರಳಿ ತಮ್ಮ ಜೀವವನ್ನೂ ಲೆಕ್ಕಿಸದೆ ಜನರು ಅನುಭವಿಸುವ ಹೃದಯವಿದ್ರಾವಕ ಚಿತ್ರಣಗಳನ್ನು ಸರೆಹಿಡಿದು ಸರ್ಕಾರದ ಸಮಾಜದ ಗಮನ ಸೆಳೆದು ಶೀಘ್ರಗತಿಯಲ್ಲಿ ಪರಿಹಾರೋಪಾಯಗಳನ್ನು ಕೈಗೊಳ್ಳಬೇಕೆಂದು ಕಾಳಜಿ ವ್ಯಕ್ತಪಡಿಸಿ ಮನಮಿಡಿವ ಸಾಮಾಜಿಕ ಕಳಕಳಿಯ ಛಾಯಾಗ್ರಾಹಕರಾಗಿದ್ದಾರೆ.
ಸಭೆ ಸಮಾರಂಭ ಅಧಿವೇಶನಗಳ ಸ್ವಾರಸ್ಯಕರ ಪ್ರಸಂಗಗಳನ್ನು ಸೆರೆಹಿಡಿದು ಜನರೆದುರಿಗೆ ಇಡುವ ವಾಸ್ತವತಾವಾದಿ ಛಾಯಾಗ್ರಾಹಕರಾಗಿ, ಅನಿರೀಕ್ಷಿತವಾಗಿ ಲಗ್ಗೆಯಿಟ್ಟ ಕೊರೊನಾ ಹಾವಳಿಗೆ ಕ್ಷಿಪ್ರವಾಗಿ ಬದಲಾದ ಜನಜೀವನದಲ್ಲಿ ಸ್ವಯಂರಕ್ಷಣಾ ಸಾಧನಗಳಾಗಿ ಕಾಣಿಸಿಕೊಂಡ ಮಾಸ್ಕ ಸ್ಯಾನಿಟೈಸರ್ ಬಳಕೆಗೆ ಮುಂದಾಗಿ ಮಾಸ್ಕದಿಂದ ಅರ್ಧ ಮುಚ್ಚಿದ ಮುಖಗಳನ್ನು ,ಲಾಕ್ ಡೌನ್ ಆದೇಶಗಳಿಂದ ಜನರು ವಾಹನಗಳಿಂದ ಮುಕ್ತವಾಗಿ ಬಿಕೊ ಎನ್ನುವ ರಸ್ತೆಗಳು, ಸಿಟಿ ಮಾರ್ಕೆಟ್ ಗಳು, ತಮ್ಮ ಜೀವ ಪಣಕ್ಕಿಟ್ಟು ಜನರಿಗೆ ಹೊರಬರದಂತೆ ವಿನಂತಿಸುವ ಹಾಗೂ ಅಡ್ಡವಾಗಿ ಬ್ಯಾರಿಕೇಡ್ ಗಳನ್ನು ಇಟ್ಟು ಲಾಟಿಹಿಡಿದುಕೊಂಡು ಕಾವಲು ಕಾಯುವ ಪೋಲಿಸರ ಶ್ರಮವನ್ನು, ಆರೋಗ್ಯ ಇಲಾಖೆಯ ಸೇವೆಯನ್ನು, ಜೀವನ ನಡೆಸಲು ಕಷ್ಟವಾಗಿ ಊರುಬಿಟ್ಟು ಹೊರಡುವ ನಿರ್ಗತಿಕ ಜನರ ಕಷ್ಟಗಳನ್ನು, ಮನೆಯಲ್ಲಿಯೇ ಲಾಕ್ ಆದ ಅಸಹಾಯಕ ಜನರ ಹತಾಶೆಯನ್ನು ಸೆರೆಹಿಡಿವ ಪ್ರಸ್ತುತೆಯ ಛಾಯಾಗ್ರಾಹಕರಾಗಿ, ಸುವರ್ಣಸೌಧ ನಿರ್ಮಾಣ, ವಿವಿಧ ಕಟ್ಟಡಗಳ ಅಡಿಗಲ್ಲು ಸಮಾರಂಭಗಳು, ಕಿತ್ತೂರು ಚೆನ್ನಮ್ಮ,ಬೆಳವಡಿ ಮಲ್ಲಮ್ಮ ಆದಿಯಾಗಿ ನಾಡಿನಲ್ಲಿ ನಡೆಯುವ ಉತ್ಸವಗಳು , ಹಬ್ಬಗಳು, ವಿಶ್ವಕನ್ನಡ ಸಮ್ಮೇಳನ, ಜಿಲ್ಲಾ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳು ಹಾಗೂ ವಿವಿಧ ಮುಷ್ಕರ ಹೋರಾಟ ಪ್ರತಿಭಟನೆಗಳು ಹೀಗೆ ಇತಿಹಾಸದಲ್ಲಿ ದಾಖಲಾಗುವಂತೆ ಛಾಯಾಚಿತ್ರಗಳನ್ನು ಸೆರೆಹಿಡಿವ ಐತಿಹಾಸಿಕ ಛಾಯಾಗ್ರಾಹಕರಾಗಿ ಅಷ್ಟೆ ಅಲ್ಲದೆ ರೈತನ ಮುಖ ಅರಳಿಸುವ ಮಳೆ,ಹೊಲದಲ್ಲಿ ನಾಟಿ ಮಾಡುವುದು ಉತ್ತುವುದು,ಬಿತ್ತುವುದು,ಹರಗುವುದು ರೈತನ ನಲಿವು,ಅವನ ಕಷ್ಟದ ಸಂಧರ್ಭಗಳನ್ನು ಎತ್ತು ಎಮ್ಮೆಗಳೊಂದಿಗೆ ಆತನ ಪರಸ್ಪರ ಸಹಜೀವನದ ನಿತ್ಯ ಚಟುವಟಿಕೆಗಳನ್ನು ಬಿಂಬಿಸುತ ಇಂಬು ನೀಡುವ ಛಾಯಾಗ್ರಾಹಕರಾಗಿ.ವಿಶ್ವ ಶ್ರೇಷ್ಠ ಹಾಗೂ ದೇಶದ ಮಹಾನ್ ನಾಯಕರು ಜಿಲ್ಲೆಗೆ ಭೇಟಿ ಕೊಟ್ಟಾಗ ಸೆರೆಹಿಡಿದ ವಿಭಿನ್ನ ಭಂಗಿಗಳು, ವಿಮಾನ ಹೆಲಿಕಾಪ್ಟರ ಮೂಲಕ ವೀಕ್ಷಣೆ ಸಂಧರ್ಭದಲ್ಲಿ ಜನನಾಯಕರ ಜೊತೆಗೆ ಕೂತು ಕ್ಲಿಕ್ಕಿಸಿದ ಛಾಯಾಚಿತ್ರಗಳು,ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆವಷ್ಟು ಆಕರ್ಷಕ ಛಾಯಾಗ್ರಹಣ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ.
ಪ್ರಶಸ್ತಿಗಳು: ನಿಷ್ಠೆಯಿಂದ ಸಂತೋಷದಿಂದ ಮಾಡುವ ಇವರ ವೃತ್ತಿ ಕೌಶಲ್ಯಕ್ಕೆ ಮೆಚ್ಚಿ ಅನೇಕ ಪ್ರಶಸ್ತಿಗಳು ಒಲಿದುಬಂದಿವೆ*ಧಾರಾವಾಡ ಆರ್ ಕೆ ಛಾಯಾ ಪೌಂಡೇಶನ್ ಮತ್ತು ಸೃಷ್ಟಿ ಸಂಘಟನೆಯಿಂದ ಕೊಡಮಾಡುವ ‘ ಬಿಂಬ-ಭಾವ’ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಬಾಬುರಾವ್ ಠಾಕೂರ್ ಅತ್ಯುತ್ತಮ ಛಾಯಾಗ್ರಾಹಕ ‘ಪ್ರಶಸ್ತಿ ಪಡೆದಿದ್ದಾರೆ.ಅಷ್ಟೆ ಅಲ್ಲದೆ
ನಾಡಿನ ಪ್ರತಿಷ್ಠಿತ ಮಠಗಳು,ಧಾರ್ಮಿಕ ಕೇಂದ್ರಗಳು ಹಾಗೂ ಸಮಾಜ ಸೇವೆ ಕಲಾಸೇವೆಯಲ್ಲಿ ತೊಡಗಿರುವ ವಿವಿಧ ಅರೆಸರ್ಕಾರಿ ಸೇವಾ ಸಂಘ ಸಂಸ್ಥೆಗಳು ಇವರ ಉತ್ತಮ ಛಾಯಾಗ್ರಹಣ ಸೇವೆಯನ್ನು ಮೆಚ್ಚಿ ಸನ್ಮಾನ,ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಿವೆ.ಅಷ್ಟೆ ಅಲ್ಲದೆ ಜಿಲ್ಲೆಯಲ್ಲಿನ ಸರ್ಕಾರಿ ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ಸೆರೆಹಿಡಿದು ಅಧಿಕಾರಿಗಳಿಂದ ಶಹಬಾಷಗಿರಿ ಪಡೆದಿದ್ದಾರೆ.
ಪಿ ಕೆ ಬಡಿಗೇರ ಅವರು ತಾವು ಸೆರೆ ಹಿಡಿದ ಉತ್ಕೃಷ್ಟ ಛಾಯಾಚಿತ್ರಗಳನ್ನು ಒಂದೆಡೆ ಸೇರಿಸಿ ಬೆಳಗಾವಿ,ಧಾರವಾಡ ,ಬೆಂಗಳೂರಿನಲ್ಲಿ ಪೋಟೋ ಎಕ್ಸಿಬಿಷನ್ ಗಳನ್ನು ಏರ್ಪಡಿಸಿ ನೋಡುಗರ ಕಣ್ಗಳಿಗೆ ರಸದೌತನ ಉಣಬಡಿಸಿದ್ದಾರೆ. ಬೆಳಗಾವಿಯಲ್ಲಿ ಪ್ರವಾಹ ಬಂದಾಗ ನೆರೆ ಸಂತ್ರಸ್ತರ ದಾರುಣ ಸ್ಥಿತಿಯನ್ನು, ನಿರ್ಗತಿಕರನ್ನು, ಪರಿಹಾರ ಕಾರ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದ ಚಿತ್ರಗಳ ಪ್ರದರ್ಶನ ಮನೋಜ್ಙವಾಗಿದ್ದು ಮುಖ್ಯಮಂತ್ರಿಯವರ ಗೌರವಕ್ಕೆ ಪಾತ್ರವಾಗಿದ್ದು ಹಾಗೂ ಜನಮೆಚ್ಚುಗೆ ಗಳಿಸಿದ್ದು ಇವರ ಛಾಯಾಗ್ರಹಣ ವೃತ್ತಿಗೆ ಸಂದ ಗೌರವವಾಗಿದೆ.