ಬೆಳಗಾವಿ:
ಕೋಟ್ಯಾನುಗಟ್ಟಲೇ ಹಣ ಖರ್ಚು ಮಾಡಿ ಬೆಳಗಾವಿ ಚಳಿಗಾಲ ಅಧಿವೇಶನ ನಡೆಸುತ್ತಿರುವ ಸರಕಾರ ಮತ್ತು ಪ್ರತಿಪಕ್ಷಗಳು ಪರಸ್ಪರ ರಾಜಕೀಯವಾಗಿ ಮಿಂಗಲ್ ಆಗಿರುವ ದಟ್ಟ ಸಂಶಯ ಉದ್ಭವವಾಗಿದೆ.
ಡಿ. 19ರಿಂದ 30ರವರೆಗೆ ಒಟ್ಟು ಹತ್ತು ದಿನ ಸಾರ್ಥಕ ಚರ್ಚೆ ಮತ್ತು ಪರಿಹಾರ ಕ್ರಮಗಳಿಗೆ ಕಾರಣವಾಗಬೇಕಿದ್ದ ಅಧಿವೇಶನ ಯಾವುದೇ ಚರ್ಚೆಗಳಾಗದೇ ಹೆಸರಿಗೆ ಮಾತ್ರ ಅಧಿವೇಶನ ನಡೆಸಿ ಅದರಲ್ಲೂ ಒಂದು ದಿನ ಮೊಟಕುಗೊಳಿಸಿ ತಮ್ಮೂರುಗಳ ಕಡೆಗೆ ಹೊರಡಲು ಗಂಟುಕಟ್ಟಿ ಹೊರಡಲಣಿಯಾದ ಬಿಜೆಪಿ-ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಪರಸ್ಪರ ಮಿಂಗಲ್ ಆಗಿರುವ ಭಾಸ ಮೂಡಿಸಿತು.
ವಿಧಾನಸಭೆ ಮತ್ತು ವಿಧಾನಪರಿಷತ್ ಎರಡೂ ಸದನಗಳಲ್ಲೂ ಶಾಸಕರು ಮತ್ತು ಮಂತ್ರಿಗಳು ಕುಳಿತುಕೊಳ್ಳದೇ ಕಂಡ ಕಂಡಲ್ಲಿ ತಿರುಗಾಡುತ್ತ ಕಾಲಕಳೆದು ಇಂದು ತಮ್ಮೂರು ಕಡೆಗೆ ಹೊರಟಿರುವುದು ದುರಾದೃಷ್ಟ.
ರಾಷ್ಟ್ರೀಯ ನಾಯಕ ಅಮಿತ್ ಷಾ ಬೆಂಗಳೂರು ಭೇಟಿ ನೆಪ ಮಾಡಿ ಆಡಳಿತ ಪಕ್ಷ ಬಿಜೆಪಿ ಇಂದು ಸಂಜೆಯೇ ಬೆಂಗಳೂರತ್ತ ಮುಖ ಮಾಡಿದ್ದು, ಇದಕ್ಕೆ ಪ್ರತಿಪಕ್ಷ ಸಹ ಯಾವುದೇ ಆಕ್ಷೇಪನೆ ಮಾಡದೇ ಸುಮ್ಮನಿರುವುದು ಸೋಜಿಗ..!
ಅಪರೂಪದ ಅಧಿವೇಶನ ನಡೆದಿರುವಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಭೇಟಿ ಹಮ್ಮಿಕೊಂಡಿದ್ದು ಜೊತೆಗೆ ಪೂರ್ಣವಾಗದ ಅಪೂರ್ಣ ಕಾಮಗಾರಿಗಳು ಮತ್ತು ಕಟ್ಟಡಗಳ ಉದ್ಘಾಟನೆಯಲ್ಲಿ ತೊಡಗಿದ್ದು, ಸದನದ ಆಸನಗಳಲ್ಲಿ ಮಂತ್ರಿಗಳು ಹೆಚ್ಚು ಕಾಣಿಸಿಕೊಳ್ಳದೇ ಇದ್ದವರು ಕಾಮಿಡಿಗೆ ಸಮಯ ಸೀಮಿತ ಮಾಡಿಕೊಂಡಿದ್ದು ಗಮನ ಸೆಳೆಯಿತು.
ಹುಲಿಯಂತೆ ಘರ್ಜಿಸುವ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಸಹ ಈ ಭಾರಿ ತೀರಾ ಮೌನಕ್ಕೆ ಜಾರಿದ್ದು ಸಪ್ಪೆ ಮತ್ತು ಕ್ಷಾರ, ಕ್ಷಿತಿಜ ಅಧಿವೇಶನಕ್ಕೆ ಕಾರಣವಾಯಿತು.
ಧಾರ್ಮಿಕ ಮೀಸಲಾತಿ, ರಾಜಕೀಯ ಮೀಸಲಾತಿ, ಸರಕಾರಿ ಮತ್ತು ಸಾರ್ವಜನಿಕ ಪ್ರಯೋಜನ ಮತ್ತು ಸಮಸ್ಯೆಗಳನ್ನು ಹೊತ್ತು ವಿವಿಧ ಸಾಮಾಜಿಕ ಸಂಘಟನೆಗಳು, ಶೋಷಿತ ವರ್ಗಗಳು, ಲಾಯರ್ ಅಸೋಸಿಯೇಷನ್, ಸರಕಾರಿ ನೌಕರರು, ಕಾರ್ಮಿಕರು, ರೈತರ ಬ್ರಹತ್ ಪ್ರತಿಭಟನೆಗಳಿಗೆ ಸರಕಾರ ಕಿವಿಗೊಡಲಿಲ್ಲ, ಪ್ರತಿಪಕ್ಷ ದನಿಗೂಡಿಸಲಿಲ್ಲ.
ಬೆಳಗಾವಿ ಚಳಿಗಾಲದ ಅಧಿವೇಶನ ಅರ್ಥಪೂರ್ಣ ನಡೆಸುವ ಇಚ್ಛೆ ಸರಕಾರಕ್ಕಿಲ್ಲ, ಸರಕಾರದ ಕಿವಿಹಿಂಡಿ ಚಾಟಿ ಬೀಸುವ ಶಕ್ತಿ ಪ್ರತಿಪಕ್ಷಗಳಿಗಿಲ್ಲ. ಈ ಹಿನ್ನಲೆಯಲ್ಲಿ ಗ್ರಾಮೀಣ ಉತ್ತರ ಕರ್ನಾಟಕ ಭಾಷೆಯಲ್ಲಿ ಇಬ್ಬರೂ ಅವರೇ ಬಿಡ್ರಿ ಎಂದು ಇಲ್ಲಿಯ ಜನತೆ ಆಕ್ರೋಶ ವ್ಯಕ್ತಪಡಿಸಿದೆ.
ಸದನಗಳಲ್ಲಿ ನಡೆದ ಯಾವ ಚರ್ಚೆ ಹಾಗೂ ಸರಕಾರ ಮಾತ್ರ ಪೂರ್ಣ ಪ್ರಮಾಣದ ಯಾವ ಉತ್ತರವನ್ನೂ ನೀಡಲಿಲ್ಲ. ವಿಧೇಯಕಗಳಿಗೆ ಪಾಸ್ ಪಡೆದು ಕಾಲಹರಣ ಮಾಡಿ ಬಿಜೆಪಿ ಸರಕಾರ ಬೆಳಗಾವಿಯಿಂದ ಕಾಲ್ಕಿತ್ತಿದ್ದು, ಚುನಾವಣೆಗೆ ಮತ ಕೇಳಲು ಈ ರಾಜಕೀಯ ನಾಯಕರೆಲ್ಲ ಹೇಗೆ ಬರುತ್ತಾರೊ ಕಾಯ್ದು ನೋಡಬೇಕಿದೆ.