ಬೆಳಗಾವಿ :
ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸ್ಥಾನಗಳಾದ ರಾಮದುರ್ಗ ಪುರಸಭೆ ವಾರ್ಡ ನಂಬರ್ (ಹಿಂದುಳಿದ ವರ್ಗ ಬ) ಹಾಗೂ ಸದಲಗಾ ಪುರಸಭೆಯ ವಾರ್ಡ್ ನಂಬರ್ (ಹಿಂದುಳಿದ ವರ್ಗ ಅ), (ಸಾಮಾನ್ಯ), (ಹಿಂದುಳಿದ ವರ್ಗ ಅ ಮಹಿಳೆ) ಮತ್ತು (ಹಿಂದುಳಿದ ವರ್ಗ ಮಹಿಳೆ) ಅಕ್ಟೋಬರ್ 28 ರಂದು ಉಪ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಪ್ರಕಟಣೆ ಹೊರಡಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳಿಗೆ/ಪಟ್ಟಣ ಪಂಚಾಯತಿ ಕೌನ್ಸಿಲರುಗಳ ಸ್ಥಾನಕ್ಕೆ ಅಕ್ಟೋಬರ್ 17 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ನಾಮಪತ್ರ ಪರಿಶೀಲಿಸುವ ದಿನಾಂಕ ಅಕ್ಟೋಬರ್ 18 ಹಾಗೂ ಉಮೇದುದಾರಿಕೆಗಳನ್ನು ಹಿಂತೆಗೆದುಕೊಳ್ಳಲು ಅಕ್ಟೋಬರ್ 20 ರಂದು ಕೊನೆಯ ದಿನಾಂಕವಾಗಿದೆ.
ಅಕ್ಟೋಬರ್ 28 ರಂದು ಮತದಾನ ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರಿಗೆ. ಒಂದು ವೇಳೆ ಮರು ಮತದಾನ ಇದ್ದಲ್ಲಿ ಅಕ್ಟೋಬರ್ 30 ರಂದು ನಡೆಸಲಾಗುವುದು ಹಾಗೂ ಮತಗಳ ಏಣಿಕೆಯನ್ನು ಅಕ್ಟೋಬರ್ 31 ರಂದು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.