This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಇಂಥ ಒಳ್ಳೆಯ ಶಾಸಕಿಯನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಜನ ನಮಗೆ ಬಲ ನೀಡಿದ್ದಾರೆ – ಡಿ.ಕೆ.ಶಿವಕುಮಾರ The people of the constituency have given us strength by electing such a good MLA - DK Shivakumar


 

ಬೆಳಗಾವಿ : “ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಜನರೇ ಆಸ್ತಿ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಂದ ಅವರು ಪ್ರಬಲರಾಗಿರುವುದರಿಂದ ಅವರನ್ನು ಸೋಲಿಸುವುದು ಯಾರಿಂದಲೂ ಸಾಧ್ಯವಿಲ್ಲದ ಮಾತು,” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸುಳೇಬಾವಿ ಸುಕ್ಷೇತ್ರದಲ್ಲಿ ಹರ್ಷಾ ಶುಗರ್ಸ್ ವತಿಯಿಂದ ಹಮ್ಮಿಕೊಂಡಿದ್ದ ಅರಿಷಿಣ ಕುಂಕುಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

“ಲಕ್ಷ್ಮೀ ಹೆಬ್ಬಾಳಕರ ಅವರು ತಮ್ಮ ಸಮಯವನ್ನು ಸ್ವಂತಕ್ಕಾಗಿ ವ್ಯಯಿಸಿಲ್ಲ. ಬದಲಾಗಿ ಜನರಿಗಾಗಿ ವ್ಯಯಿಸಿದ್ದಾರೆ. ಜನರೇ ಅವರ ಶಕ್ತಿಯಾಗಿದ್ದಾರೆ. ದೇವರು ವರ ಅಥವಾ ಶಾಪ ನೀಡುವುದಿಲ್ಲ. ಬದಲಾಗಿ ಅವಕಾಶ ನೀಡುತ್ತಾನೆ. ಇಂಥ ಶಾಸಕಿಯನ್ನು ಪಡೆಯುವ ಅವಕಾಶ ಹೊಂದಿದ ಜನತೆ ಅವರ ನಿರಂತರ ಸೇವೆ ಪಡೆಯಲು ಮುಂದಾಗಲಿ,” ಎಂದರು.

“ಲಕ್ಷ್ಮೀ ಹೆಬ್ಬಾಳಕರ ಅವರು ಶಾಸಕಿಯಾದ ನಂತರ ನಿಷ್ಠೆ, ಪ್ರಾಮಾಣಿಕತೆಯಿಂದ, ಯಾವುದೇ ಕಪ್ಪುಚುಕ್ಕೆಗಳಿಲ್ಲದಂತೆ ಜನಸೇವೆ ಮಾಡುತ್ತಿದ್ದಾರೆ. ಚುನಾವಣೆಯ ಸಂದರ್ಭದ ಹೊರತಾಗಿಯೂ ಜನಸಾಮಾನ್ಯರಿಗೆ ಹತ್ತಿರವಾಗೇ ಇದ್ದಾರೆ. ಇಂಥ ಒಳ್ಳೆಯ ಶಾಸಕಿಯನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಜನ ನಮಗೆ ಬಲ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲೂ ಅವರನ್ನು ಗೆಲ್ಲಿಸಲು ಕ್ಷೇತ್ರದ ಜನ ಪಣ ತೊಡಬೇಕು,” ಎಂದರು.

“ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಹೆಚ್ಚಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರ ಆದಾಯ ಪಾತಾಳಕ್ಕಿಳಿದಿದೆ. ಇಂಥ ಸರಕಾರ ಕಿತ್ತೆಸೆಯಲು ಜನ ಸಂಕಲ್ಪಿಸಿದ್ದಾರೆ. ಈ ಬಾರಿ ಯಾವ ಕಾರಣಕ್ಕೂ ಬಿಜೆಪಿ ಗೆಲ್ಲುವುದು ಸಾಧ್ಯವಿಲ್ಲ,” ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಜವಳಿ ಪಾರ್ಕ್: “ನೇಕಾರರ ಅಭ್ಯುದಯಕ್ಕಾಗಿ ಬೆಳಗಾವಿಯಲ್ಲಿ ಜವಳಿ ಪಾರ್ಕ್ ನಿರ್ಮಿಸುವ ಕುರಿತು ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಲಾಗುವುದು,” ಎಂದು ಅವರು ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, “ತಾಯಿ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವ ಜರುಗುವ ಈ ಗದ್ದುಗೆಯ ಸ್ಥಳದಲ್ಲಿ ಅರಿಷಿಣ ಕುಂಕುಮ ಹಮ್ಮಿಕೊಂಡಿರುವುದು ನಮ್ಮ ಪೂರ್ವಜನ್ಮದ ಪುಣ್ಯ.ತಾಯಿ ಮಹಾಲಕ್ಷ್ಮಿ ದೇವಿಯ ಸಾಕ್ಷಿಯಾಗಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಪ್ರಾಮಾಣಿಕವಾಗಿ, ಸತ್ಯ ನಿಷ್ಠೆಯಿಂದ ಎಲ್ಲ ತರಹದ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದೇನೆ. ಕಿರಿಯರಿಂದ ಹಿಡಿದು ಹಿರಿಯವರೆಗೆ ಎಲ್ಲರ ಬಗ್ಗೆ ಕಾಳಜಿ ಕನಿಕರವನ್ನಿಟ್ಟುಕೊಂಡು ನಿಮ್ಮೆಲ್ಲರ ಸೇವೆಗಳಿಗೆ ಧ್ವನಿಯಾಗಿದ್ದೇ‌ನೆ. ಕೆಲವರು ನನ್ನ ಹೆಸರಿನ ಶ್ರೇಯಸ್ಸು ಪಡೆಯಲು ಮುಂದಾಗುವುದಿದೆ. ಆದರೆ ನಾನು ಮಾತ್ರ ಜನರ ಆಶೀರ್ವಾದದಿಂದ ಈ ಹಂತಕ್ಕೆ ಬಂದವಳು” ಎಂದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಹೇಶ ಸುಗನೆಣ್ಣವರ, ರತ್ನವ್ವ ಕೋಲಕಾರ, ದತ್ತ ಬಂಡಿಗಣಿ, ನಾರಾಯಣ ಲೋಕರೆ, ಇಸ್ಮಾಯಿಲ್ ತಿಗಡಿ, ಇಸಾಕ್ ಜಮಾದಾರ, ಸಂಭಾಜಿ ಯಮೋಜಿ, ತುಳಜಪ್ಪ ಯರಜರ್ವಿ, ಬಸಪ್ಪ ಕುಕಡೊಳ್ಳಿ, ಹಾಗೂ ಗ್ರಾಮ ಪಂಚಾಯಿತಿಯ ಎಲ್ಲ ಪದಾಧಿಕಾರಿಗಳು, ಸಾವಿರಾರು ಮಹಿಳೆಯರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply