ಗೋಕಾಕ :
ನಗರದಲ್ಲಿ ಉದ್ಯಮಿಯನ್ನು ಅಪಹರಿಸಲಾಗಿದೆ ಎಂದು ಅವರ ಕುಟುಂಬದವರು ದೂರು ನೀಡಿದ್ದಾರೆ.
ನಿನ್ನೆ ಸಂಜೆ ವೈದ್ಯರೊಬ್ಬರ ಜೊತೆ ಉದ್ಯಮಿ ಮಾತುಕತೆ ನಡೆಸಿದ ನಂತರ ಫೋನ್ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಅವರ ಕುಟುಂಬದವರು ನಿನ್ನೆಯೇ ಗೋಕಾಕ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ 24 ತಾಸು ಕಳೆದರು ವ್ಯಕ್ತಿ ಪತ್ತೆಯಾಗಿಲ್ಲ ಎಂದು ಕುಟುಂಬದವರು ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜು/ಮುನ್ನಾ ಝಂವರ ನಾಪತ್ತೆಯಾಗಿದ್ದು ಅವರು ವೈದ್ಯರೊಬ್ಬರ ಜೊತೆ ಮಾತನಾಡಿದ ನಂತರ ಅವರ ಸುಳಿವು ಸಿಕ್ಕಿಲ್ಲ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.