ಚಿಕ್ಕೋಡಿ: ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗದಿಂದ ಗುಡ್ಡಾಪುರ, ಮಹಾಲಿಂಗಪುರ, ಬಾಗಲಕೋಟೆ, ಇಂಡಿ, ವಿಜಯಪುರ, ಮಿರಜ ಮಾರ್ಗವಾಗಿ ನೂತನ ಬಸ್ಸುಗಳ ಕಾರ್ಯಾಚರಣೆ ಪ್ರಾರಂಭವಾಗಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಚಿಕ್ಕೋಡಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಮರಿದೇವರಮಠ ತಿಳಿಸಿದ್ದಾರೆ.
ಚಿಕ್ಕೋಡಿ ಘಟಕದಿಂದ ಬೆಳಿಗ್ಗೆ 11ಕ್ಕೆ ಚಿಕ್ಕೋಡಿ- ಬಾಗಲಕೋಟೆ, ನಿಪ್ಪಾಣಿ ಘಟಕದಿಂದ ನಿಪ್ಪಾಣಿ-ಮಹಾಲಿಂಗಪೂರ ಮಾರ್ಗವಾಗಿ ಬೆಳಿಗ್ಗೆ 7.50, 11.30, ಮಧ್ಯಾಹ್ನ 12.10, ಸಂಜೆ 4.15, ಸಂಕೇಶ್ವರ ಘಟಕದಿಂದ ಬೆಳಿಗ್ಗೆ 7ಕ್ಕೆ ಸಂಕೇಶ್ವರ- ವಿಜಯಪುರ, ಹುಕ್ಕೇರಿ ಘಟಕದಿಂದ ಬೆಳಿಗ್ಗೆ 8ಕ್ಕೆ ಹುಕ್ಕೇರಿ-ವಿಜಯಪುರ, ಗೋಕಾಕ ಘಟಕದಿಂದ ಮಧ್ಯಾಹ್ನ 2.45ಕ್ಕೆ ಬೆಳಗಾವಿ-ಗೋಕಾಕ-ಗುಡ್ಡಾಪುರ, ರಾಯಬಾಗ ಘಟಕದಿಂದ ಬೆಳಿಗ್ಗೆ 9.30ಕ್ಕೆ, ಮಧ್ಯಾಹ್ನ 2.40ಕ್ಕೆ ಮಿರಜ- ರಾಯಬಾಗ- ಚಿಕ್ಕೋಡಿ, ಅಥಣಿ ಘಟಕದಿಂದ ಬೆಳಿಗ್ಗೆ 10.15ಕ್ಕೆ ಮಿರಜ- ಅಥಣಿ- ಇಂಡಿ ಮಾರ್ಗವಾಗಿ ನೂತನ ಬಸ್ ಕಾರ್ಯಾಚರಣೆ ಮಾಡಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಕ್ಕೋಡಿ ವಿಭಾಗದಿಂದ 7 ಮಾರ್ಗಗಳಲ್ಲಿ ಬಸ್ ಕಾರ್ಯಾಚರಣೆ
