ಬೆಳಗಾವಿ : ಮಹಾಂತೇಶ ನಗರದ ನಿವೃತ್ತ ಎಎಸ್ಐ ಮಹಾದೇವ ಬಾಗೋಡಿ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆ. ಶನಿವಾರ ರಾತ್ರಿ ಮನೆಗೆ ನುಗ್ಗಿದ ಕಳ್ಳರು 150 ಗ್ರಾಂ ಚಿನ್ನವನ್ನು ಕದ್ದು ಪರಾರಿಯಾಗಿದ್ದಾರೆ. ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದು, ಕಳ್ಳತನಕ್ಕೆ ಸಂಬಂಧಿಸಿದ ಕೆಲ ಸುಳಿವು ದೊರೆತಿದೆ ಎಂದು ತಿಳಿಸಿದ್ದಾರೆ.
ಮಹಾಂತೇಶ ನಗರದ ನಿವೃತ್ತ ಎಎಸ್ಐ ಮನೆಯಲ್ಲಿ ಕಳ್ಳತನ
