ಮೂಡಲಗಿ: ಬಿ.ಎಸ್. ಎನ್. ಎಲ್. ಬೆಳಗಾವಿ ಜಿಲ್ಲಾ ದೂರಸಂಪರ್ಕ ಸಲಹಾ ಸಮಿತಿಗೆ ಮೂವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಶಿಫಾರಸ್ಸಿನ ಮೇರೆಗೆ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿದ ಬಗ್ಗೆ ಕೇಂದ್ರ ಸಂವಹನ ಇಲಾಖೆಯ ನಿರ್ದೇಶಕಿ ಉರ್ವಶಿ ಸಾಗ್ವಾನ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಸಂತೋಷ ಕಾಗವಾಡೆ, ಬೆಳಗಾವಿ ಉತ್ತರ ಮತಕ್ಷೇತ್ರದ ಈರಯ್ಯ ಖೋತ, ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಗುಣವಂತ ಸುತಾರ ಇವರುಗಳು ಎರಡು ವರ್ಷಗಳ ಅವಧಿಗೆ ನೇಮಕವಾಗಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.