ಜನ ಜೀವಾಳ ಜಾಲ: ಬೆಳಗಾವಿ :
ಬೆಳಗಾವಿಯಲ್ಲಿ ತಲ್ಲಣ ಮೂಡಿಸಿದ್ದ ವಿದ್ಯಾರ್ಥಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಯನ್ನು ಅಮಾನುಷವಾಗಿ ಕೊಲೆಗೈದ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಪ್ರಕರಣದ ವಿವರ :
ಕ್ಯಾಂಪ್ ಪೊಲೀಸ್ ಠಾಣಾ ಹದ್ದಿಯಲ್ಲಿ ದಿನಾಂಕ : 19/10/2022 ರಂದು ಪ್ರಜ್ವಲ್ ಶಿವಾನಂದ ಕರೆಗಾರ ವಯಸ್ಸು : 16 ವರ್ಷ ಇವನಿಗೆ ಈತನು ಕಲಿಯುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆ , ಬೆಳಗಾವಿಯಿಂದ ಈತನನ್ನು ಯಾರೋ ಆರೋಪಿಗಳು ಅಪಹರಣ ಮಾಡಬಹುದಾ ಅಥವಾ ಯಾರೋ ಆರೋಪಿಗಳು ಅಪಹರಣಕ್ಕೆ ಹೋಗಬಹುದಿತ್ತು ಅಥವಾ ಯಾರೋ ಒಬ್ಬ ಹುಡುಗನ ತಂದೆ ತಂದೆ ದಿನಾಂಕ 20 /10/2022 ರಂದು ನೀಡಿದ ದೂರಿನನ್ವಯ, ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿತ್ತು.
ತದನಂತರ ಅದೇ ದಿವಸ ಮಧ್ಯಾಹ್ನ ಪಿರ್ಯಾದಿ ಇವರು ಠಾಣೆಗೆ ಆಗಮಿಸಿ , ತನ್ನ ಮರು ಹೇಳಿಕೆಯಲ್ಲಿ ತನ್ನ ಮಗನಿಗೆ ಯಾರೋ ಆರೋಪಿತರು ಯಾರೋ ಉದ್ದೇಶದಿಂದ ತನ್ನ ಮಗನಿಗೆ ಅಪಹರಣ ಮಾಡಿಸಿಕೊಂಡು ಹೋಗಿ ಮುಚ್ಚಿ ಗ್ರಾಮದ ಹದ್ದಿಯ ಮೇಲೆ ಕಲ್ಲು ಹಾಕಿ ಹರಿತವಾದ ಆಯುಧದಿಂದ ಅಲ್ಲಲ್ಲಿ ಹೊಡೆದು ಭಾರೀ ಗಾಯಪಡಿಸಿ ಕೊಲೆ ಮಾಡಿದ ಎಂದು ನೀಡಿದ ಮರು ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ . ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಕ್ಯಾಂಪ್ ಮತ್ತು ತಂಡದವರು ಈ ಗಂಭೀರ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡು , ಈ ಕೊಲೆಯನ್ನು ಲಕ್ಷ್ಮಣ ಯಲ್ಲಪ್ಪಾ ಹೊಸಮನಿ ವಯಸ್ಸು 19 ವರ್ಷ ಸಾ : ಖನಗಾಂವ ಬಿ.ಕೆ. ತಾ : ಜಿ : ಬೆಳಗಾವಿ ಹಾಗೂ ಇನ್ನಿಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಸೇರಿ ಕ್ಷುಲ್ಲಕ ಮತ್ತು ವೈಯಕ್ತಿಕ ದ್ವೇಷಕ್ಕೆ ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿದ್ದು ಸದರಿ ತಂಡದ ಕಾರ್ಯವನ್ನು ಮೇಲಧಿಕಾರಿಗಳು ಶ್ಲಾಘಿಸಿದ್ದಾರೆ. ಕ್ಯಾಂಪ್ ಪಿಐ ಧರ್ಮಟ್ಟಿಯವರ ತನಿಖೆ ನಡೆಸಿದ್ದರು. ಇಬ್ಬರನ್ನು ರಿಮ್ಯಾಂಡ ಹೊಮ್ ಗೆ ಹಾಕಲಾಗಿದೆ ಎಂದು ಡಿಸಿಪಿ ರವೀಂದ್ರ ಗಡಾದಿ ತಿಳಿಸಿದ್ದಾರೆ.