ಬೆಳಗಾವಿ: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಇದುವರೆಗೆ ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಆರೋಪಿಗಳ ಪೈಕಿ ಒಬ್ಬನಾಗಿರುವ ಪ್ರದೂಷ್ ಇದೀಗ ಬೆಳಗಾವಿ ಹಿಂಡಲಗಾ ಜೈಲು ಪಾಲಾಗಿದ್ದಾನೆ.
ಬೆಂಗಳೂರಿನ ಗಿರಿನಗರ ನಿವಾಸಿ. ದರ್ಶನ್ ಅಭಿಮಾನಿ. ಕೊಲೆ ಪ್ರಕರಣದಲ್ಲಿ ದರ್ಶನ್ ರಕ್ಷಣೆ ಮಾಡಲು ₹30 ಲಕ್ಷ ಪಡೆದಿದ್ದ ಇವರು, ಇತರೆ ನಾಲ್ವರಿಗೆ ನೀಡಿದ್ದರು. ಈ ಹಣವನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.
ರೇಣುಕಾ ಸ್ವಾಮಿಯ ಹಲ್ಲೆಯ ವಿಡಿಯೋವನ್ನು ಪ್ರದೂಷ್ ತನ್ನ ಐಫೋನ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದ. ಅದು ಸಹ ದರ್ಶನ್ ಸೂಚನೆಯಂತೆ. ಈತ ಪ್ರಕರಣದ 14ನೇ ಆರೋಪಿಯಾಗಿದ್ದಾನೆ.
ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಅನುಮತಿ ನೀಡಿತ್ತು. ಅದರಂತೆ ಅವರು ಇಂದು ಬಳ್ಳಾರಿ ಜೈಲು ಸೇರಿಕೊಂಡಿದ್ದಾರೆ.
ದರ್ಶನ್ ಜತೆಗೆ ಬೇರೆ ವಿಚಾರಣಾಧೀನ ಕೈದಿಗಳನ್ನೂ ಬೇರೆಡೆ ಸ್ಥಳಾಂತರ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ.
ವಿಶೇಷ ಆತಿಥ್ಯಕ್ಕೆ ಸಂಬಂಧಿಸಿದಂತೆ ದಾಖಲಾದ ಮೂರು ಪ್ರಕರಣಗಳ ಪೈಕಿ ಎರಡರಲ್ಲಿ ದರ್ಶನ್ ಮೊದಲ ಆರೋಪಿ ಆಗಿದ್ದಾರೆ. ಅದರ ತನಿಖೆಗೆ ಮೂರು ತಂಡ ರಚಿಸಲಾಗಿದೆ.
ಯಾರು ಯಾವ ಜೈಲಿಗೆ?
ದರ್ಶನ್ : ಬಳ್ಳಾರಿ ಜೈಲು
ಪವನ್, ರಾಘವೇಂದ್ರ ನಂದೀಶ್: ಮೈಸೂರು ಜೈಲಿಗೆ
ಜಗದೀಶ್: ಶಿವಮೊಗ್ಗ
ಧನರಾಜ್: ಧಾರವಾಡ ಜೈಲು
ವಿನಯ್: ವಿಜಯಪುರ ಜೈಲು
ನಾಗರಾಜ್: ಕಲಬುರಗಿ
ಲಕ್ಷ್ಮಣ: ಶಿವಮೊಗ್ಗ
ಪ್ರದೂಷ್: ಬೆಳಗಾವಿ
ಪವಿತ್ರಗೌಡ: ಪರಪ್ಪನ ಅಗ್ರಹಾರ.
ಅನುಕುಮಾರ್: ಪರಪ್ಪನ ಅಗ್ರಹಾರ.
ದೀಪಕ್: ಪರಪ್ಪನ ಅಗ್ರಹಾರ.
ಈಗಾಗಲೇ ರವಿ, ಕಾರ್ತಿಕ್, ನಿಖಿಲ್, ಕೇಶವಮೂರ್ತಿ ತುಮಕೂರು ಜೈಲಿಗೆ ಆಗಲೇ ಸ್ಥಳಾಂತರ ಮಾಡಲಾಗಿತ್ತು.