ಕಾರವಾರ : ಹಲವು ತಿಂಗಳ ಹಿಂದೆ ಅಂಕೋಲಾ ತಾಲೂಕು ಶಿರೂರು ಗುಡ್ಡ ಕುಸಿತದಲ್ಲಿ ನದಿ ನೀರು ಪಾಲಾಗಿದ್ದ ಕೇರಳದ ಅರ್ಜುನನ ಲಾರಿ ಕೊನೆಗೂ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಇನ್ನಷ್ಟೇ ಜಿಲ್ಲಾಡಳಿತ ಅಧಿಕೃತವಾಗಿ ಮಾಹಿತಿ ನೀಡಬೇಕಾಗಿದೆ.
ಮೂರನೇ ಹಂತದ ಕಾರ್ಯಾಚರಣೆ ನಡೆಯುತ್ತಿರುವ ಗುಡ್ಡ ಕುಸಿತದ ಸ್ಥಳದಲ್ಲೇ ಇದು ಪತ್ತೆಯಾಗಿದೆ. ಖ್ಯಾತ ಮುಳುಗುತಜ್ಞರಾಗಿರುವ ಈಶ್ವರ್ ಮಲ್ಪೆ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಲಾರಿ ಚಕ್ರ ಮೊದಲಿಗೆ ಕಂಡುಬಂದಿದೆ. ಲಾರಿ ತಲೆ ಕೆಳಗಾದ ಸ್ಥಿತಿಯಲ್ಲಿ ನೀರಿನಲ್ಲಿ ಮುಳುಗಿದ್ದು ಲಾರಿ ಚಕ್ರಕ್ಕೆ ಈಶ್ವರ ಮಲ್ಪೆ ಹಗ್ಗ ಕಟ್ಟಿ ಬಂದಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು ಕೇರಳದ ಮಾಧ್ಯಮಗಳು ಸ್ಥಳಕ್ಕೆ ಧಾವಿಸಿ ವರದಿ ಮಾಡಿದ್ದವು. ಮಾತ್ರವಲ್ಲ ಕೇರಳ ಸರಕಾರ ಸ್ವತಹ ಘಟನೆ ಬಗ್ಗೆ ಅತೀವ ಕಾಳಜಿ ವಹಿಸಿ ಕರ್ನಾಟಕ ಸರಕಾರಕ್ಕೆ ಪತ್ರ ಬರೆದಿರುವುದನ್ನು ಇಲ್ಲಿ ನೆನಪಿಸಬಹುದು.