ಕೆಲವೇ ತಿಂಗಳುಗಳ ಹಿಂದೆ ಬ್ರಿಟನ್ ಪ್ರಧಾನಮಂತ್ರಿ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ರಿಷಿ ಸುನಾಕ್ ಅವರಿಗೆ ಇದೀಗ ಮತ್ತೆ ದೇಶದ ಪ್ರಧಾನಿಯಾಗುವ ಸುಯೋಗ ಕೂಡ ಬಂದಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಭಾರತೀಯರಿಗೆ ಇದೊಂದು ಸಂತಸಪಡುವ ಸುದ್ದಿ. ಭಾರತೀಯ ಮೂಲದ ರಿಷಿ ಸುನಾಕ್ ಬ್ರಿಟನ್ ಪ್ರಧಾನಿಯಾಗಿ
ಆಯ್ಕೆಯಾಗಿರುವುದು ಅತ್ಯಂತ ಸಂತಸದ ಸುದ್ದಿ. ಅದರಲ್ಲೂ ಬ್ರಿಟನ್ ಭಾರತವನ್ನು 2ಶತಮಾನಗಳ ಕಾಲ ಆಳಿತು . ಆದರೆ ಬದಲಾದ ಕಾಲಮಾನದಲ್ಲಿ ಇದೀಗ ಭಾರತೀಯರೇ ಬ್ರಿಟನ್ ನಲ್ಲಿ ಪಾರುಪತ್ಯ ಮಾಡುವ ಅಪರೂಪದ ಘಟನೆ ಸಾಕ್ಷಿಯಾಗಿದೆ.
ಲಂಡನ್ :
ಬ್ರಿಟನ್ ಪ್ರಧಾನಿಯಾಗಿ ಭಾರತ ಮೂಲದ ರಿಷಿ ಸುನಾಕ್ ಆಯ್ಕೆಯಾಗಿದ್ದಾರೆ. ಅವರ ಸ್ಪರ್ಧಿಯಾಗಿದ್ದ ಪೆನ್ನಿ ಮೊಡಾಂರ್ಟಾ ಸ್ಪರ್ಧೆಯಿಂದ ಹಿಂದೆ ಸರಿದ ರಿಷಿ ಆಯ್ಕೆ ಸುಗಮವಾಗಿದೆ. ಬ್ರಿಟಿಷ್ ಪ್ರಧಾನಿಯಾಗಿ ಆಯ್ಕೆಯಾದ ಮೊದಲ ಭಾರತೀಯ ಮೂಲದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ರಿಷಿ ಸುನಾಕ್ ಅವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿ ಅವರ ಅಳಿಯ.
ರಿಷಿ ಅವರು ಕೇವಲ 42 ವರ್ಷ ವಯಸ್ಸಿನವರು. ಇಷ್ಟು ಸಣ್ಣ ವಯಸ್ಸಿನಲ್ಲೇ ಅವರಿಗೆ ಬಹು ದೊಡ್ಡ ಹುದ್ದೆ ಒಲಿದು ಬಂದಿದೆ.
ಜಗತ್ತಿನ ಬಹು ದೊಡ್ಡ ಪ್ರಜಾಪ್ರಭುತ್ವ ದೇಶದಿಂದ ಬ್ರಿಟನ್ ಗೆ ವಲಸೆ ಹೋಗಿದ್ದ ರಿಷಿ ಸುನಾಕ್ ಈಗ ಆ ದೇಶದ ಪ್ರಧಾನಿ ಪಟ್ಟ ಅಲಂಕರಿಸಿರುವುದು ಸಮಸ್ತ ಭಾರತೀಯರಿಗೆ ಸಂತಸದ ಸುದ್ದಿಯಾಗಿದೆ.