ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಹಶೀಲ್ದಾರ ಪ್ರಕಾಶ ಶ್ರೀಧರ ಗಾಯಕವಾಡ ಅವರ ಮೇಲೆ ಖಚಿತ ಮಾಹಿತಿ ಮೇರೆಗೆ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ.
ಪ್ರಕಾಶ ಗಾಯಕವಾಡ ಅವರಿಗೆ ಸೇರಿರುವ ಬೆಳಗಾವಿಯ ಗಣೇಶಪುರ, ನಿಪ್ಪಾಣಿಯ ಮನೆಗಳು ಮತ್ತು ಖಾನಾಪುರದ ಅವರ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ.
ಬುದವಾರದಂದು ರಾಜ್ಯದ ಎಂಟು ಕಡೆಗಳಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಅದರಲ್ಲಿ ಖಾನಾಪುರ ತಹಸೀಲ್ದಾರರು ಸೇರಿದ್ದಾರೆ.