ಬೆಳಗಾವಿ :
ಉಡುಪಿಯ ನೇಜಾರಿನಲ್ಲಿ ನಾಲ್ವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಪೊಲೀಸರು ಪ್ರಮುಖ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಬಂಧಿಸಿದ್ದಾರೆ.
ಪ್ರವೀಣ ಅರುಣ್ ಚೌಗಲೆ(35) ಬಂಧಿತ ವ್ಯಕ್ತಿ. ಈತ ಮಂಗಳೂರು ವಿಮಾನ ನಿಲ್ದಾಣದ ಸೆಕ್ಯುರಿಟಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ಸಾಂಗ್ಲಿ ಮೂಲದವನು ಎನ್ನಲಾಗಿದೆ. ಕುಡಚಿಯ ಸಂಬಂಧಿಕರ ಮನೆಯಲ್ಲಿ ತಲೆ ಮರೆಸಿಕೊಂಡಿದ್ದ ಇವನನ್ನು ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಬಂಧಿಸಲಾಗಿದೆ.
ಭಾನುವಾರ ಉಡುಪಿಯ ನೇಜಾರಿನಲ್ಲಿ ತಾಯಿ ಹಾಗೂ ಮೂವರು ಮಕ್ಕಳನ್ನು ಕೊಲೆಗೆಯ್ಯಲಾಗಿತ್ತು.