ಬೆಳಗಾವಿ ಮಹಾನಗರಪಾಲಿಕೆಗೆ ಶೋಭಾ ಸೋಮನಾಚೆ ನೂತನ ಮೇಯರ್ ಹಾಗೂ ರೇಷ್ಮಾ ಪಾಟೀಲ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಬೆಳಗಾವಿ : jj news
ಬೆಳಗಾವಿ ಮಹಾನಗರ ಪಾಲಿಕೆ ನೂತನ ಮೇಯರ್ ಆಯ್ಕೆ ಇಂದು ನಡೆದಿದೆ. ಒಂದೂವರೆ ವರ್ಷದ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಆದರೆ, ಕೆಲ ಕಾರಣಗಳಿಂದ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆದಿರಲಿಲ್ಲ. ಇಂದು ನಡೆದ ನಿರ್ಣಾಯಕ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಯವರು ಆಯ್ಕೆಯಾಗಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆದಿತ್ತು. ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ್ ಬೆನಕೆ ಅವರು ಮಹತ್ವದ ಪಾತ್ರ ವಹಿಸಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಮೇಯರ್ ಸ್ಥಾನ ಮರಾಠಿ ಭಾಷಿಕರ ಪಾಲಾಗಿರುವುದು ವಿಶೇಷ.
ಸೋಮವಾರ ಬೆಳಿಗ್ಗೆ ಪಾಲಿಕೆಯಲ್ಲಿ ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ವಾಣಿ ಜೋಶಿ, ಶೋಭಾ ಸೋಮಾನಾಚೆ ಮತ್ತು ರೇಷ್ಮಾ ಪಾಟೀಲ ರೇಸ್ ನಲ್ಲಿದ್ದರು. ಆದರೆ ಶೋಭಾ ಸೋಮಾನಾಚೆ ಅವರನ್ನು ಮೇಯರ್ ಹಾಗೂ ರೇಷ್ಮಾ ಪಾಟೀಲ ಉಪ ಮೇಯರ್ ಸ್ಥಾನಕ್ಕೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದರು. ಉಪ ಮೇಯರ್ ಸ್ಥಾನಕ್ಕೆ ವೈಶಾಲಿ ಬಾತಕಾಂಡೆ ಸಹಾ ನಾಮಪತ್ರ ಸಲ್ಲಿಸಿದ್ದರು.
ಕಳೆದ ಕೆಲವು ದಿನಗಳ ಹಿಂದೆ ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಸರಕಾರದ ನಿರ್ದೇಶನದಂತೆ ಅಧಿಸೂಚನೆಯನ್ನು ಹೊರಡಿಸಿದ್ದರು.
ಈ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಒಟ್ಟು 58 ಸದಸ್ಯರುಗಳ ಪೈಕಿ ಬಿಜೆಪಿ 35 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬೆಳಗಾವಿ ಪಾಲಿಕೆಯ ಇತಿಹಾಸದಲ್ಲಿ ದಾಖಲಾಯಿತು.
ಶೋಭಾ ಸೋಮಾನಾಚೆ ಅವರು ಬೆಳಗಾವಿ ನಗರದ 57 ವಾರ್ಡಿನಿಂದ ರೇಷ್ಮಾ ಪಾಟೀಲ ಅವರು 33 ವಾರ್ಡಿನಿಂದ ಆಯ್ಕೆಯಾಗಿದ್ದರು.