ಬೆಳಗಾವಿ :
ಪ್ರತಿ ವಾರದಂತೆ ರವಿವಾರ ಲಿಂಗಾಯತ ಸಂಘಟನೆಯಿಂದ ನಗರದ ಹಳಕಟ್ಟಿ ಭವನದಲ್ಲಿ ಬಸವಾದಿ ಶರಣರ ಕುರಿತು ಚಿಂತನ ಮಂಥನ ಕಾರ್ಯಕ್ರಮ ಜರುಗಿತು.
ಉಪನ್ಯಾಸ ನೀಡಿದ ಡಾ.ದಾನಮ್ಮ ಜಗದೀಶ ಚಿನಿವಾರ ಅವರು ಹಿಮೋಗ್ಲೋಬಿನ್ ಎಂಬ ವಿಷಯವಾಗಿ ಮಾನವನಿಗೆ ಅತ್ಯಗತ್ಯವಾದ ರಕ್ತದೊತ್ತಡ ಮತ್ತು ರಕ್ತದ ಪರಿಚಲನೆ, ರಕ್ತದ ಒತ್ತಡ, ರಕ್ತಹೀನತೆಯಿಂದ ಆಗುವ ಅಪಾಯಗಳು ಬಿಟರೂಟ್ ಮತ್ತು ಕಿವಿ ಹಣ್ಣುಗಳನ್ನು ತಿನ್ನುವುದರಿಂದ ರಕ್ತಹೀನತೆ ನೀಗುತ್ತದೆ ಎಂದು ಹೇಳಿದರು.
ಸುಮಾರು 68 ಜನರಿಗೆ ರಕ್ತ ತಪಾಸಣೆ ಮಾಡಿದರು.
ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರ, ಶಂಕರ ದೇವರಮನಿ, ವಿ.ಕೆ.ಪಾಟೀಲ ಮಾತನಾಡಿದರು.
ಮಹಾದೇವಿ ಅರಳಿ, ಜಯಕ್ಕ , ಮೀನಾಕ್ಷಿ ನಾಡಗೌಡ, ಶ್ವೇತಾ ಮುಂಗರವಾಡಿ, ಬಿ.ಪಿ. ಜೇವನಿ ದೊಡ್ಡಬಂಗಿ ವಚನ ಗಾಯನ ಹಾಡಿದರು.
ಸಂಗಮೇಶ ಅರಳಿ ನಿರೂಪಿಸಿದರು. ಮಹಾತೇಂಶ ಮೆಣಸಿನಕಾಯಿ ಪರಿಚಯಿಸಿದರು.