ಬೆಳಗಾವಿ :
ಇಲ್ಲಿನ ಆರ್ ಪಿ ಡಿ ಕಾಲೇಜ್ ಎದುರಿನ ಶ್ರೀ ಕೃಷ್ಣ ಮಠದಲ್ಲಿ ಜನವರಿ 26 ರಂದು ಸಂಜೆ 4 ಕ್ಕೆ ವಿದ್ಯಾರ್ಥಿ ನಿಲಯದ ವತಿಯಿಂದ ಭಾರತೀಯ ಸಂಸ್ಕೃತಿ ಮತ್ತು ಯುವಕರ ಸ್ಥಿತಿಗತಿ ವಿಷಯವಾಗಿ ಚಿಂತನ ಮಂಥನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹಿರಿಯ ವಕೀಲ ಆರ್.ಎಸ್. ಮುತಾಲಿಕ್ ಮುಖ್ಯ ಅತಿಥಿಯಾಗಿ ಆಗಮಿಸುವರು. ಶ್ರೀ ಕೃಷ್ಣ ಮಠದ ಅರ್ಚಕ ವೆಂಕಟೇಶ ಆಚಾರ್ಯ ಉಪಸ್ಥಿತರಿರುವರು. ಪತ್ರಕರ್ತ ಸುಭಾಷ ಕುಲಕರ್ಣಿ ಅಧ್ಯಕ್ಷತೆ ವಹಿಸುವರು.