ಬೆಂಗಳೂರು: ಬ್ರಹ್ಮಾಂಡ ಗುರೂಜಿ ಇದೀಗ ಭಯಂಕರ ಭವಿಷ್ಯ ನುಡಿದಿದ್ದಾರೆ. ಪತ್ರಕರ್ತರ ಜೊತೆ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಎರಡು ವರ್ಷದ ಅವಧಿಯಲ್ಲಿ ಕೇವಲ ಒಂದುವರೆ ವರ್ಷ ಮಾತ್ರ ಪ್ರಧಾನಿಯಾಗಿ ಮುಂದುವರಿಯುತ್ತಾರೆ. ನಂತರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆಶ್ರಮ ಸೇರಲಿದ್ದಾರೆ. ಈ ರಾಜಕೀಯ ಹೊಲಸು ಸರಿ ಮಾಡಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಏನು ಬದಲಾವಣೆ ಆಗದೆ ಬೇಜಾರಾಗಿ ರಾಜೀನಾಮೆ ನೀಡಬಹುದು. ಅಥವಾ ಬೇರೆ ಆಯ್ಕೆ ಮಾಡಿಕೊಳ್ಳಬಹುದು. ಮುಂದೆ ಒಬ್ಬ ಸನ್ಯಾಸಿ ಜಗತ್ತನ್ನು ಆಳಲಿದ್ದಾನೆ. ಮಾತ್ರವಲ್ಲ ಮೂರನೇ ಮಹಾಯುದ್ಧ ಸಂಭವಿಸಲಿದೆ ಎಂದು ಅವರು ಭವಿಷ್ಯದ ಬಗ್ಗೆ ಇನ್ನಷ್ಟು ಕರಾಳ ಚಿತ್ರಣವನ್ನು ಹೊರಗೆಡವಿದ್ದಾರೆ.
ಕರ್ನಾಟಕ ಮೂರು ಭಾಗ ಆಗೋದು ಶತಸಿದ್ದ. ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹೀಗೆ ಮೂರು ಭಾಗ ಆಗಲಿದೆ. ಮೂವರು ಮುಖ್ಯಮಂತ್ರಿಗಳಾಗಲಿದ್ದಾರೆ. ಇದು 2025 ರಿಂದ 2032ರವರೆಗೆ ನಡೆಯಲಿದೆ ಎಂದರು.
2025 2026ಕ್ಕೆ ಮೂರನೇ ಮಹಾಯುದ್ಧ ನಡೆಯಲಿದ್ದು, 13 ಮುಸ್ಲಿಂ ರಾಷ್ಟ್ರಗಳು ಭಾರತದ ಮೇಲೆ ಮಾಡಲಿದ್ದಾರೆ. ಭಾರತ ದೇಶ ಮತ್ತೆ ಎರಡು ಭಾಗ ಆಗಲಿದೆ. ಇದರ ನಡುವೆ ಬಾಂಗ್ಲಾದೇಶ-ಚೈನಾ ಕುತಂತ್ರ ಮಾಡಿ ಭಾರತ ದೇಶದ ಮೇಲೆ ದಾಳಿ ಮಾಡಲಿವೆ. ನಮಗೆ ಅಮೆರಿಕದಿಂದಾಗಲಿ ಬೇರೆ ಯಾವ ದೇಶದಿಂದ ಸಹಾಯ ಸಿಗುವುದಿಲ್ಲ. ರಷ್ಯಾವೊಂದೇ ಸಹಾಯ ಮಾಡಲಿದೆ ಎಂದರು.
ಭಯಂಕರ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ !
