ಖಾನಾಪುರ :
ವಿದ್ಯುತ್ ತಂತಿ ಸ್ಪರ್ಶಗೊಂಡು ಬಾಲಕ ಮೃತಪಟ್ಟ ಘಟನೆ ಖಾನಾಪುರ ತಾಲ್ಲೂಕು ಕಾಮಸಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಬಸಪ್ಪ ಕೋಲ್ಕಾರ (7)ಮೃತಪಟ್ಟ ಬಾಲಕ. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬ ನೆಡುವ ಬದಲು ಮರದ ಕಂಬ ನೆಟ್ಟು ವಿದ್ಯುತ್ ತಂತಿ ಎಳೆದಿದ್ದರು. ವಿದ್ಯುತ್ ತಂತಿ ಜೋತು ಬಿದ್ದಿದ್ದು ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಬಸಪ್ಪ ಮೃತಪಟ್ಟಿದ್ದಾನೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.